Poem

ದೇವ ಇರುವ

ದೇವರೆಲ್ಲಿ ದೇವರೆಲ್ಲಿ ಹುಡುಕುತಿದೆ ಈ ಮನ...?
ತಾಯ ಗರ್ಭದಿ ಕುಳಿತು ತಾಯಿಯ ಹುಡುಕುವ ತೆರದಲಿ.
ಕಾಣನೇ ಆ ದೇವ ನಗುವ ಹೂಮೊಗದಲಿ,ಹೊನ್ನ ಹಸಿರ ಚಿಗುರಲಿ,
ಕಂಡೆನವನ ಹೊಸ ಮಳೆಯ ಘಮಘಮ ದಲಿ,
ಭಯವ ಕಳೆದ ಸಾಂತ್ವನ ದಲಿ, ರೈತ ಬೆಳೆದ ಅನ್ನದಲಿ.

ದೇವರೆಲ್ಲಿ ದೇವರೆಲ್ಲಿ ಹುಡುಕುತಿದೆ ಈ ಮನ...?
ತನ್ನ ಪರಿಮಳವ ಅರಸಿ ಅಲೆವ ಕಸ್ತೂರಿ ಮೃಗದ ತೆರದಲಿ,
ಕಾಣನೇ ಆ ದೇವ ಜನ್ಮವಿತ್ತ ತಾಯಿಯಲಿ,ವಿದ್ಯೆ ಕೊಟ್ಟ ಗುರುವಿನಲಿ,
ಕಂಡೆನವನ ಕರುಣೆ ಪ್ರೀತಿ ಸ್ನೇಹದಲಿ,
ಅಶಾಂತ ಮನದ ಭರವಸೆಯಲಿ,ಜೀವ ಉಳಿಸೋ ವೈದ್ಯನಲಿ.

ದೇವರೆಲ್ಲಿ ದೇವರೆಲ್ಲಿ ಹುಡುಕುತಿದೆ ಈ ಮನ...?
ನನ್ನೊಳಗಿನ ಅವನ ಅರಸಿ ಅಲೆದೆ ಭವದಲಿ
ಕಾಣಿಸದ ಸುಳಿಗಾಳಿ ಕಾಣದೇ ನಮ್ಮ ಉಸಿರಿನಲಿ
ಕಾಣದ ಆ ದೇವ ಇರುವ ನಮ್ಮ ನಂಬಿಕೆಯಲಿ
ದೇವರಿಲ್ಲಿ ದೇವರಿಲ್ಲಿ ಜಗದ ಸಕಲ ಚರಾಚರಗಳಲಿ, ಶ್ರೀ ಗೌರಿ ಚರಣದಲಿ.🙏🙏🙏

By: ವೇದಮಠ

Comments[0] Likes[1] Shares[1]

Submit Your Comment

Latest Comments

No comments are available!