Poem

ದೇವರ ಜೊತೆ ಮೆರವಣಿಗೆ

                 ದೇವರ ಜೊತೆ ಮೆರವಣಿಗೆ 

ಗರ್ಭವೆಂಬ ಗರ್ಭಗುಡಿಯಲ್ಲಿ  ಉದ್ಭವಿಸಿ 
ದಿನನಿತ್ಯ ರಕ್ತಾಭಿಷೇಕದಲ್ಲಿ ತೇಲಿಸಿ 
ಕರುಳೆಂಬ ಹೂಮಾಲೆಯಲ್ಲಿ ತುಂಬಿಸಿ 
ನಿತ್ಯ  ಪ್ರೀತಿ, ಮಮತೆ,ಕರುಣೆಯಿಂದ ಪೂಜಿಸಿ 
ನವ ಮಾಸದ ನಂತರ ಹೊರ ತಂದೆ ಮೆರವಣಿಗೆಗಾಗಿ.

ದೇವರ ಜೂತೆ ಮೆರವಣಿಗೆಯ ಅನುಭವದ ತೇರಿನಲ್ಲಿ 
ಪಡೆದೆ ಮಡಿಲು ಸ್ಪರ್ಶದ ಮಮತೆ 
ಕುಡಿದೆ ಎದೆ ಹಾಲಿನ ಅಮೃತ 
ಸವಿದೆ  ಭುಜದ  ನಿದ್ರೆಯ ಸುಖ 
ಮುಳುಗಿದೆ ಅಮ್ಮ ಎಂಬ ಅಳುವಿನ ಅಮಲಿನಲ್ಲಿ
 
ತೆರೆಯದ ಕಣ್ಣಿಗೆ  ದೃಷ್ಟಿ  ತಾಯಿ 
ಅರಿಯದ ಬುದ್ದಿಗೆ ಅರಿವು ತಾಯಿ 
ಹಸಿದ ಹೊಟ್ಟೆಗೆ ಆಹಾರ ತಾಯಿ 
ತೊದಲು ನುಡಿಗೆ ಮಾತು ತಾಯಿ 
ಮಿಡಿವ ಹೃದಯಕ್ಕೆ ಉಸಿರು ತಾಯಿ 

ಮಾಡದಿರು ಜೀವನದಲ್ಲಿ ಎರಡಕ್ಷರ ಪದದ  
ಹುಡುಕಾಟ ಅದು ವ್ಯರ್ಥ 
ಮರೆಯದಿರು ಜೀವನದಲ್ಲಿ ಎರಡಕ್ಷರ ಜೊತೆಗೆ ಒಡನಾಟ ಅದುವೇ ಸಮರ್ಥ.

                                      

By: ಗೌತಮ್ ರಾವ್ ಜಿ

Comments[4] Likes[18] Shares[6]

Submit Your Comment

Latest Comments

JAYANTH
Jul 22,2020

Awesome lines...❤

Manoj
Jul 09,2020

👌👌👌👌

Preetham
Jul 08,2020

Super Lines...ALL THE BEST

Vinay datta bhousle .D
Jul 08,2020

Lovely