Poem

ದೇವರೇ ನೀನೆಂತಹ ಅದ್ಭುತ ನಿರ್ದೇಶಕ

ಇಲ್ಲೊಂದು ಜನನ, ಅಲ್ಲೊಂದು ಮರಣ
ಇಲ್ಲೊಂದು ಹುಟ್ಟು ಹಬ್ಬದ ಸಂಭ್ರಮಾಚರಣೆ
ಅಲ್ಲೊಂದು ಅಂತಿಮ ಸಂಸ್ಕಾರದಲ್ಲಿ ಕೇಳುವರಿಲ್ಲ ಬವಣೆ
ಹೆಸರಿಡಲು ನೆಡೆಯುತ್ತಿದೆ ಇಲ್ಲೊಂದು ನಾಮಕರಣ
ಹೆಸರಳಿಸಲು ನೆಡೆಯುತ್ತಿದೆ ಅಲ್ಲೊಂದು ತಿಥಿಯ ಹೂರಣ
ಹುಟ್ಟು ಸಾವುಗಳನ್ನು ಒಟ್ಟಿಗೆ ನಿರ್ಧರಿಸುವ,
ದೇವರೇ ನಿನೆಂತಹ ಅಧ್ಬುತ ನಿರ್ದೇಶಕ
ವಿಧಿಯೊಂದಿಗೆ ವಿಲಾಸಿಸುವ ವಿಧೂಷಕ!

ಇಲ್ಲೊಂದು ಬಾಲ್ಯ, ಅಲ್ಲೊಂದು ವೃದ್ದಾಪ್ಯ
ಇಲ್ಲೊಂದು ಕಣ್ಣಲ್ಲಿ ನಾಳೆಗಳ ಕನಸಿನ ಹೊಳಪು
ಅಲ್ಲೊಂದು ಕಣ್ಣಲ್ಲಿ ನಿನ್ನೆ ಕಂಡ ಕನಸಿನ ನೆನಪು
ತೆವಳುತ್ತಿದೆ ಇಲ್ಲೊಂದು ಜೀವ ನೆಡೆವುದ ಕಲಿಯಲು
ತೆವಳುತ್ತಿದೆ ಅಲ್ಲೊಂದು ಜೀವ ಶಾಶ್ವತವಾಗಿ ಮಲಗಲು
ಆದಿ ಅಂತ್ಯಗಳನ್ನು ಒಟ್ಟಿಗೆ ನಿರ್ವಹಿಸುವ,
ದೇವರೇ ನಿನೆಂತಹ ಅಧ್ಬುತ ನಿರ್ದೇಶಕ
ನಿಂತಲ್ಲೆ ನಿಶ್ಚಯಿಸುವೇ ನಮ್ಮೆಲ್ಲರ ಜಾತಕ!

ಇಲ್ಲೊಬ್ಬ ಬಡವ, ಅಲ್ಲೊಬ್ಬ ಶ್ರೀಮಂತ
ಇಲ್ಲೊಬ್ಬ ರೈತ, ಅಲ್ಲೊಬ್ಬ ರಾಜಕಾರಣಿ
ಇಲ್ಲೊಂದು ಮದುವೆ, ಅಲ್ಲೊಬ್ಬಳು ವಿಧವೆ
ಇಲ್ಲೊಂದು ಪ್ರಾಣದಾನದ ಬಿಕ್ಷೆ, ಅಲ್ಲೊಬ್ಬ ಅಮಾಯಕನಿಗೆ ಶಿಕ್ಷೆ
ಇಲ್ಲೊಂದು ಜಾತಿ, ಅಲ್ಲೊಂದು ಧರ್ಮ
ನಾಯಕ, ಖಳನಾಯಕರನ್ನು ಒಟ್ಟಿಗೆ ಮೇಳೈಸುವ,
ದೇವರೇ  ನಿನೆಂತಹ ಅಧ್ಬುತ ನಿರ್ದೇಶಕ
ಚಿತ್ರಕಥೆಯಲ್ಲೆ ಮೋಡಿ ಮಾಡುವ ಮಾಂತ್ರಿಕ!

ನರಕದಲ್ಲಿ ನೀ ನೀಡುವ ಶಿಕ್ಷೆಯ ಆಳ ಬಲ್ಲವರ್ಯಾರು?
ಸ್ವರ್ಗದಲ್ಲಿ ನೀ ನೀಡುವ ಸೌಲಭ್ಯ ತಿಳಿದವರಾರು?
ಕಥೆಯಲ್ಲಿ ನೀ ನೀಡುವ ತಿರುವುಗಳನ್ನು ಊಹಿಸಲು ಸಾಧ್ಯವೇನು?
ತಿದ್ದಿಕೊಳ್ಳಲು ನೀ ನೀಡುವ ಕುರುಹುಗಳನ್ನು ಗ್ರಹಿಸಬಲ್ಲವೇನು?
ನಿನ್ನ ಕಣ್ಣಿನ ಕ್ಯಾಮರಾದಿಂದ ಯಾರಾದರೂ ತಪ್ಪಿಸಕೊಳ್ಳಲು‌ ಸಾಧ್ಯವೇ?
ಊಹೆಗೂ ಮಿಲುಕಿ ನಮಲ್ಲೆರ ನಡುವೆಯೇ ನೀ ಸಾಗುವೆ
ಹಣೆಯ ಮೇಲೆ ಪುಟಗಟ್ಟಲ್ಲೆ ಚಿತ್ರಕಥೆ ಬರೆಯುವ,
ದೇವರೇ ನಿನೆಂತಹ ಅಧ್ಬುತ ನಿರ್ದೇಶಕ
ನಿನ್ನಾಜ್ಞೆಯಂತೆ ನಟಿಸುವುದಷ್ಟೆ ನಮ್ಮೆಲ್ಲರ ಕಾಯಕ! 

By: ಪಾಲಾಕ್ಷ ಗೌಡ ಕೆ.ಎಲ್

Comments[3] Likes[12] Shares[1]

Submit Your Comment

Latest Comments

Sunil
Jul 08,2020

Nice gowdre

Kavana
Jul 06,2020

ಚನ್ನಾಗಿದೆ

pratibha d
Jul 06,2020

Nice