Poem

ದೃಷ್ಟಿ-ಕೋನ

ರೆಕ್ಕೆಯಂತೆ ರೆಪ್ಪೆ ಬಡಿದ ರೀತಿ,
ದಿಟ್ಟತನವೂ ದಿಟ್ಟಿಸಿದೆ
ದೃಷ್ಟಿಯೂ ದೀಕ್ಷೆಯಷ್ಟೇ!

ದ್ವಂದ್ವ, ದಂತಕತೆ , ದಾರ್ಷನಿಕತೆ
ದೂರ ದಿಗಂತಗಳೆಲ್ಲವೂ
ಅಂತಚಕ್ಷುಗಳ ಅಂತರ್ಗತ ಅರಿವಿನ ಪರಿಮಾಣದ  ಪರಿಣಾಮ!

ತರಂಗ ಮತ್ತು ಕಣಗಳೆರಡೂ ಕಣ್ಣಿಗೆ
ಕಂಡೂ ಕಾಣದಿರುವಾಗ
ಸತ್ಯಾಸತ್ಯತೆ ಅರಿವೂ ಅಜ್ಞಾತವಾಗಿರುವಾಗ ಯಾರನ್ನೊ ಅಳೆವ , ತೂಗುವ
ತೂಕ ನಮಗೆಲ್ಲಿದೆ?

ನಾವೇ ಅನಂತದ ಅಂಶವಾಗಿರುವಾಗ ಪರಿಪೂರ್ಣತೆಯ ವ್ಯಾಖ್ಯೆಯೂ 
ವ್ಯೋಮವೇ ಅಲ್ಲವೇ?

ಅಯೋಮಯ ಆಯಾಮದ ಅವಿಚ್ಛಿನ್ನತೆ ಅಲೆಯೋ ಅಂಶವೋ ನಾನರಿಯೇ!
ಐಚ್ಛಿಕತೆಗಿಂತಲೂ ಅನೈಚ್ಛಿಕತೆಯೇ ಹೆಚ್ಚಿದಂತೆ, 

ಹೆಪ್ಪುಗಟ್ಟಿದ ನೀರಿನಷ್ಟು 
ಪಾರದರ್ಶಕತೆ ಪಡೆಯುವುದು 
ಪರಿಧಿಯಾಚೆಯ ಪುಟದಲ್ಲಿದೆ !

By: ಗೀತಾಲಕ್ಷ್ಮಿ ಕೊಚ್ಚಿ

Comments[6] Likes[48] Shares[6]

Submit Your Comment

Latest Comments

Sourava Papti
Jul 09,2020

ಅನಂತ ಮತ್ತು ಅಂತರ್ಗತಗಳ ವಿಮರ್ಶೆ ಚೆನ್ನಾಗಿದೆ

Pooja kumbar
Jul 06,2020

ಮಸ್ತ್ 🙌👏👏👏👏👏👏👏

Swathishree Jagannath
Jul 06,2020

Nice sister

Punith
Jul 06,2020

ಅಧ್ಬುತ. ಪ್ರಬುದ್ಧ. ಅನಂತದ ಅರಿವಿನ ಪರಿಚಯ ಈ ಕಾವ್ಯ.

Suneetha k
Jul 06,2020

ಚಂದದ ಕವಿತೆ