Poem

ಗಜಲ್-1

ಗಜಲ್

ವುಹಾನ್ ನಿಂದ ಹುಟ್ಟಿದ ಅಗೋಚರ ಶಕ್ತಿ *ಪಡೆದ* ಕೊರೋನಾ ನಾನು
ಅಸುರರ ವರಪುತ್ರನಾಗಿ ಜನಿಸಿ ನಿಮ್ಮಲಿ *ಮೆರೆದ* ಕೊರೋನಾ ನಾನು

ಊರು ತಿರುಗುವವರನು ಕೈ-ಕಾಲು ಮುರಿದು ಮನೆಯಲಿ ಬಂಧಿ ಮಾಡಿರುವೆ
ಹೊರ ಬಂದವರ ಒಳಹೊಕ್ಕು ನಿಧಾನದಿ ಬರೆ *ಎಳೆದ* ಕೊರೋನಾ ನಾನು

ಅಹಂಕಾರದಿ ಮೆರೆಯುವವರೆಲ್ಲ ಮುದುಡಿ ಮೂಲೆಯಲಿ ಕುಳಿತಿದ್ದಾರೆ
ಮನದ ಕರೆಗಂಟೆ ನಿಲ್ಲಸಲು ಜವರಾಯನ *ಕರೆದ* ಕೊರೋನಾ ನಾನು

ಪಟ್ಟಕಟ್ಟಿ ಆಳುವ ರಾಜರ ತಲೆಗಳು ನನ್ನಯ ಕಾಲ ಅಡಿ ಬಿದ್ದಿವೆ
ಅಳಿಯದೇ ದ್ವಿಗುಣಿಯಾಗಿ ನಿಮ್ಮ ಜೀವದಲಿ *ನಲಿದ* ಕೊರೋನಾ ನಾನು

ನೀವು ಬಂದು ಕರೆಯದೆ ಬರುವವನಲ್ಲ, ಬಂದರೆ ಬೇಗ ಬಿಡುವುದಿಲ್ಲ
ಮನುಜರೆಲ್ಲರು ಮಾಡಿದ ಪ್ರಕೃತಿ ನಾಶಕೆ *ಸಿಡಿದ* ಕೊರೋನಾ ನಾನು

ಗಂಗೆಯ ಒಡಲು ಓಝೋನ್ ಪದರವ ನನ್ನ ಮರಣದ ನಂತರ ನೋಡಿ
ವಿಶ್ವ ಸಮರದಂತೆ ಸಹಸ್ರ ನರರ ಜೀವ *ತೆಗೆದ* ಕೊರೋನಾ ನಾನು

ಬಡತನ ಹಸಿವು ಪರಿಚಯಿಸಿರುವೆ ಅದಕೆ ಶಹಬ್ಬಾಸ್ ನೀಡಿರಿ ನನಗೆ
ಕುಟುಂಬದ ಪ್ರೀತಿ ವಾತ್ಸಲ್ಯವ ಜನರಲಿ *ಸೆಳೆದ* ಕೊರೋನಾ ನಾನು

ಈಗಾದರೂ ಇಟ್ಟಿರುವುದ ಕೊಟ್ಟು ಕೊಟ್ಟಿರುವುದ ಮರೆತು ಜೀವಿಸಿರಿ
ಜೀವಕ್ಕಿಂತ ಹಣ ಹಿರಿದಲ್ಲವೆಂದು ಕಥೆ *ಬರೆದ* ಕೊರೋನಾ ನಾನು

ಮುಂದೆಯಾದರೂ ಅರಿತು ಬೆರೆತು ಬಾಳಿದರೆ ನಾ ಬಂದಿದ್ದು ಸಾರ್ಥಕ
 *ನಂರುಶಿ* ಬರೆಯುವ ಗಜಲ್ ಗಳಿಗೆ ತಲೆಬಾಗಿ *ಮಣಿದ* ಕೊರೋನಾ ನಾನು.

By: ನಂರುಶಿ ಕಡೂರು

Comments[1] Likes[1] Shares[0]

Submit Your Comment

Latest Comments

shivashankarr86@gmail.com
Jul 08,2020

ಕೊರೋನಾ ಬಂದೈತಿ ನೋಡಣ್ಣ... ಆದಷ್ಟು ಬೇಗ ಓಡಿಸೋ ಅಣ್ಣ