Poem

ಗಜಲ್

ಗಜಲ್
ನಿನ್ನ ಮೌನ ಬಿಟ್ಟುಬಿಡು ನಮ್ಮಿಬ್ಬರ ಮನಗಳೆರಡು ಮಾತಾಡಲಿ ಸಖಿ
ನಿನ್ನ ಮೌನದ ಭಾಷೆಯನು ಏನೆಂದು ನಾ ಹಗೆ ತಿಳಿದುಕೊಳ್ಳಲಿ ಸಖಿ

ಮೌನದೂರ ಬಾಗಿಲ ಎಷ್ಟಂತ ಬಡಿಯುತ್ತಿರುವೆ ಹೇಳು ನಾ ಬಂದ ಸದ್ದು ಕೇಳಿಸದೆ
ನಿನ್ನ ಮೌನವನು ಮುರಿದು ಮಾತಾಗಿ ಬಾ, ನೀನೊಮ್ಮೆ ನನ್ನ ಜೊತೆಯಲಿ ಸಖಿ

ಬಿಂಕು ಬಿಗುಮಾನ ಸಿಟ್ಟುಸೆಡವುಗಳೆಲ್ಲವನು ಮರೆತು ಬಿಡು ನನ್ನೊಳಗಿನ ಕನಸು ನೀನು
ನಿನ್ನ ಮೌನಕ್ಕೆ ಭಾವಕ್ಕೆ ರೆಕ್ಕೆ ಮೂಡಿ ಇಂದೆ ನನ್ನೆದೆಗೆ ಹಾರಿಬಿಡಲಿ ಸಖಿ

ಈ ರಾತ್ರಿಗೆ ದೀಪ ಹಚ್ಚುವುದ ಮರೆತು ಕಾದು ಕೂತಿದ್ದೇನೆ ನಿನ್ನ ಬರುವಿಗಾಗಿ
ನಿನ್ನ ಮೌನದ ಬೊಗಸೆಯೊಳಗೆ ಬೆಳಕ ಬೀಜವಿಡಿದು ಬಂದು ಬಿಡು ಜೀವ ಕಾಯಲಿ ಸಖಿ

ನನ್ನ ಮನದ ಬಯಲ ತುಂಬ ನಿನ್ನ ಕಾಲಕಿರುಗೆಜ್ಜೆಯೇ ಮಾತತಂತೆ ಪಿಸುಗುಡುತಿವೆ
ನಗುವ ಚಂದಿರನ ಮುಂದೆ ಮೌನ ಸರಿಸಿ ಬಿಡು ‘ಪ್ರಕಾಶ’ನೊಳಗೆ ಹೂಗಳೆಲ್ಲ ಅರಳಲಿ ಸಖಿ
 

By: ಪ್ರಕಾಶ ಬುದ್ದಿನ್ನಿ

Comments[16] Likes[85] Shares[28]

Submit Your Comment

Latest Comments

ಡಾ. ಶರಣಪ್ಪ ಗಬ್ಬೂರ್
Jul 23,2020

ಗಜಲ್ ಗೆ ಸೂಕ್ತವಾದ ಮತ್ತು ಸಮಂಜಸವಾದ ಪದಗಳಾಗಿವೆ. ಸಖಿಯ ಸಾಮೀಪ್ಯದಲ್ಲಿ ಭಾರತೀಯ ಸಂಸ್ಕೃತಿಯ ಹೊತ್ತು ಬಂದಿರುವ ಗಜಲ್ ಶ್ರೇಷ್ಟತೆಯನ್ನು ಎತ್ತಿ ಸಾರುತ್ತದೆ. ಹೆಚ್ಚಾಗಿ ಗಜಲ್ ಪ್ರೇಮಕಾವ್ಯವಾದರೂ ಅದರೊಳಗೆ ಇಡೀ ಜಗದ ಪ್ರೇಮದೊಳಗೆ ನೋವಿನ ನೋಟ ಹೇಳುತ್ತಿರುವುದು ಒಂದು ಪ್ರೇಮೆಯ. ಮೌನಕ್ಕೆ ಭಾಷೆಯನ್ನು ಸಂಶೋಧಿಸಲು ಹೊರಟಿರುವ ಕವಿ ಮತ್ತು ಕಾವ್ಯ ಅವ್ಯಕ್ತ ಅಗೋಚರಗಳನ್ನು ಅಭಿವ್ಯಕ್ತಪಡಿಸಲು ಹೊರಟಿರುವುದು ಅಸಾಧನೀಯ ಸಂದೇಶ. ಬೆಳಕ ಬೀಜವಿಡಿದು ಬರೀ ಸಳಿಗೆ ಮಾತ್ರವೇ ಅಲ್ಲ ಇದು ಲೋಕಾಂತದ ರೂಢಿಯ ಕನಸುಗಳ ಹಾದಿ. ನಗುವ ಚಂದರಿನ ಮುಂದೆ ಮೌನ ಸರಿಸಿಬಿಡು ಎನ್ನುವಲ್ಲಿ ಕವಿಯ ಕಾವ್ಯ ಮನದಾಳದ ಆಂತರ್ಯವನ್ನು ಪರ ಮತ್ತು ವಿರೋಧಗಳ ನಡುವೆ ವಿಪರ್ಯಾಸದ ಬದುಕು ಹೊರಹಾಕುತ್ತದೆ. ಒಳ್ಳೆಯ ಗಜಲ್. ಅಭಿನಂದನೆಗಳು. ಡಾ. ಶರಣಪ್ಪ ಗಬ್ಬೂರ್ 9902416040

Jayakumar
Jul 11,2020

Super sir

Malleshwarayya
Jul 08,2020

ಸುಪರ್..ಪ್ರಕಾಶ.. ಗಜಲ್. ಕವಿತೆಗೆ..ನೀನೇ..ಸಾಟಿ..

ನಾಗರಾಳ ಮಹಾದೇವಪ್ಪ .ಡಾ
Jul 06,2020

ಮುಕ್ತ ಮನಸಿನ ಪರಿಭಾವದಲ್ಲಿ ಹೆಣೆದ ಈ ಗಜಲ್, ಮೌನದ ಮನಸ್ವಿಯ ಜೊತೆಗಿನ ಮಾತು ಸ್ವಗತವಾಗಿಯೇ ವ್ಯಕ್ತವಾಗಿದೆ. ಮನದ ಒಳನೋಟದಲ್ಲಿ ನೋಡುವ ಇರಾದೆಯಲ್ಲಿ ಗಜಲ್, ಅರ್ಥವಂತಿಕೆಯನ್ನು ವಿಸ್ತರಿಸುತ್ತಾ ಹೋಗುತ್ತದೆ. ತುಂಬಾ ಸೊಗಸಾಗಿದೆ.

Mounesh
Jul 06,2020

Nice lines..

SushmapatilSushmashmapatilmapatilSushpatilSushm
Jul 06,2020

Tumba Bavanegalinda tumbida kavite....

ಖಾದ್ರಿ ಇಇಸ್ಮಾಯಿಲ್
Jul 06,2020

ಭಾವನೆಗಳ ಲಹರಿ ತುಂಬಾ ಸೊಗಸಾಗಿ ಮೂಡಿ ಬಂದಿದೆ

rabkAಾ
Jul 06,2020

ಅದ್ಬುತ ಸಾಲುಗಳ ರಚನೆ ಸರ್.

Mahantesh
Jul 06,2020

Nice poem.... 👌👌👌👌💐

Siddanna
Jul 06,2020

Suprb

Sunita
Jul 06,2020

Nice lines..

Vijaya D
Jul 06,2020

Good poem

M MAREPPA
Jul 06,2020

ಅದ್ಭುತವಾದ ಗಜಲ್

appeddagಗ
Jul 06,2020

ಮಧುರ ಪ್ರೀತಿಯ ( ಪ್ರೆಮದ) ಗಜಲ್ ರಚನೆ ಸುಂದರವಾಗಿದೆ ಸರ್. ಹಾಗೆಯೆ ನಿಮ್ಮಿಂದ ಗಜಲ್ ಸಾಹಿತ್ಯ ಹೊರಹೊಮ್ಮಲಿ ಸರ್.