Poem

ಗಜಲ್ - ಗೆಳತಿ

ಹೇ.ಸಖಿಯೇ ಪ್ರೇಮದ ಸುಖಿಯೇ...
ಆರಬ್ಬ್ ಪ್ರೇಮಿ ಗಾಲಿಬ್ ಬಂದು 
ನಿನ್ನ ಅಪಹಾರಿಸಿದಾಗೆ..
ಹರವಳಿಕೆಯ ಕನಸೊಂದು ಕಂಡು... 
ನಡು ರಾತ್ರಿಯಲ್ಲಿ ನಿದ್ದೆಗೆಟ್ಟ ಪಕೀರನಾಗಿ...
ನನ್ನ ಸಾಕಿಯ ನೆನಪೊಂದು ಗಜಲ್ ಕಟ್ಟಿದೆ..

ಸಖಿಗೆ ಪ್ರೀತಿ ಬೆರೆತರೆ ಉಸಿರು ಬಸಿದು 
ಹೊನಲು ಚಿಗುರಿ ನುಡಿಸಿತಂದು ಗೆಜ್ಜೆ ಕಾಲ್ಧ್ ನಿ....
ವಿರಾಹದ ಕಪ್ಪುಕೋಣಿಯೊಳಗೆ ಕಪ್ಪು ಬಿಳುಪು 
ಆಟವಾಡಿಸಿ ಒಡಿ ಹೋದಳಂದು 
ಅರಬ್ಬೀ ಮಾಂತ್ರಿಕನಿಂದೆ...
ನೀ ಹೇಳಿ ಹೋಗಿದ್ದರೆ ಸಾವಿನ 
ಕೊನೆ ಗಳಿಗೆವರೆಗೂ ಒಡಲ ಉಸಿರು 
ಬಿಗಿ ಹಿಡಿಯುತ್ತಿದೆ...
ಅದೇನೋ ಸಾವಿನ ಗುಟುಕಿನಲ್ಲಿ 
ಪ್ರೇಮಾದ ಓಲೆ ಬರೆದು ಸಾವೇ ನಾಳೆ ಬಾ 
ಎಂದು ಎದೆಯುಸಿರಿಗೆ ಗರ್ಜಿಸುತ್ತಿದೆ....

ಆ ಮಾಂತ್ರಿಕನ ಮೋಹದ ಸೆಳೆತ 
ಅದೆಷ್ಟೋ ವರ್ಷಗಳ ನಮ್ಮ ಪ್ರೀತಿಯ 
ಸೆಳೆತವನ್ನೆ ಬೇಟೆಯಾಡಿತು ನೋಡೆ ಸಖಿ...
ಹೌದು...ನಾ ಕಡು ಬಡವ 
ಅದರೇ ಆರಬ್ ಮಾಂತ್ರಿಕನಂತೆ 
ಬಣ್ಣ ಹಚ್ಚಿ ನಗಲು ನನಗೆ ತಿಳಿಯದು...
ಅವಾ...ಆರು ತಿಂಗಳು ಕೂಡಿ
ಮೋಹದ ಉಡುಗೆ ತೊಡಿಸಿ
ರಕ್ತ ಮಾಂಸಗಳನೀರಿ ಮೋಹದ ಅಮಲಿನಲ್ಲೇ ಕೈ ಜಾರಿಕೊಳ್ಳುವನು.
ನೀ ಅದನರಿಯದೇ ನಮ್ಮ ಪ್ರೀತಿಗೆ 
ವಿರಾಹದ ದಾರಿ ತೋರಿಸಿದೆ ಅಲ್ಲೇ ಸಾಕಿ....

ನಾ...
ಪ್ರೀತಿ ಸಿಗದೆ ವಿರಾಹತಳಾದೆ ಬೊಗಸೆ 
ಚಂದ್ರನಿಗೆ ಕೈ ಜೋಡಿಸಿ ನಮಿಸಿ...
ಗಾಲಿಬ್ ನ ಪ್ರೇಮಾಕ್ಕೆ ಮರುಳಾಗಿ 
ಸಖಿಯ ಸುಖಕ್ಕೆ ಮರೆಯಾಗಿ...
ಹುಣ್ಣುಮೆ ಚಂದಿರನ ಬಚ್ಚಿಡ ಬಹುದೇ?.. 
ಎಂಬ ಚಿಂತೆಯಲ್ಲಿ ಪ್ರೇಮದ ಪಕೀರನ 
ಗಜಲ್ ಹಿಂದೆ ಪ್ರೀತಿಯ ಸಖಿಯ 
ಸವಿನೆನಪಿನ ಸಾಲುಣ್ಣಿಮೆ...

By: ಪ್ರಹ್ಲಾದ ಡಿ ಎಂ

Comments[0] Likes[3] Shares[0]

Submit Your Comment

Latest Comments

No comments are available!