Poem

ಗುರು ದರ್ಶನ.

                 ಗುರು ದರ್ಶನ
ಗುರು ಗುರು ಗುರು ಎಂದುಡಿಕಿದವನ
ಮನಗಣ್ತೆರೆಯಲು ಗುರು ಸಿಕ್ಕಿಹನು.
                ನಿನಗೆ ಅರಿವಿನ ದಾರಿ ತೋರಿದವರೆಲ್ಲಾ
                ಗುರುಗಳು ಮರುಳ ಎನ್ನುತ್ತಾ ಬಂದಿಹನು
                ಶೂನ್ಯದಲ್ಲಿರುವೇ ನೀನಿನ್ನು ಎಂದಿಹನು
                ದಿಟ್ಟಿಸಿ ನೋಡುತ್ತಾ ನಸುನಗು ಚೆಲ್ಲಿದನು
ಮಾತಿನ ಜಡಿ ಏಟು ನೀಡಿದನು
ಆ ಏಟಿಗೆ ಮನವು ನರಳಾಡಿತು, 
ನೊಂದು ಕಣ್ಣಿಗೆ ಕೋಡಿ ಬಿದ್ದಿತ್ತು 
ಗುರುವಿಗೆ ತಲೆಬಾಗಿ ಹರ್ಷದಿಂದ. 
                ಎತ್ತು ನಿನ್ನ ಖಾಲಿ ಜೋಳಿಗೆಯ 
                ನಿಲ್ಲದಿರು ಜ್ಞಾನದ ಸಿರಿಸಂಪತ್ತು
                ತುಂಬಿ ತುಳುಕುವ ತನಕ ಅಲೆದ
                ಲೆದು ಬೇಡು ಜ್ಞಾನಭೀಕ್ಷೆಯೆಂದನು
ನಿನ್ನನ್ನು ನೀ ಅರಿಯುವ ತನಕ
ದೊರಕದು ಆ ಭೀಕ್ಷೆಯೆಂದನು
ಅಂದಕಾರದ ಬವಣೆಗೆ ಮುಕ್ತಿ
ನೀಡಲು ಬಂದ ಗುರು ಇವನು.                                                   
                                               

By: ಯೋಗಾನಂದ ಎನ್ ಬಿ

Comments[0] Likes[2] Shares[0]

Submit Your Comment

Latest Comments

No comments are available!