Poem

ಹಬ್ಬಗಳು

      '' ಹಬ್ಬಗಳು ''

ಬನ್ನಿರೆಲ್ಲ ಸಾರೋಣ ಹಬ್ಬಗಳ ಕಾರಣ 
ವಿಶ್ವಶಾಂತಿಗೆ ಮಾನವೀಯತೆಯೇ  ತೋರಣ ||೧||

ಶುಭ ಸೋಜಿಗ ದಿನಗಳವು
ಕೂಡಿಸುವವು ಮನ ಮಂದಿಯ  
ಬಿತ್ತರಿಸುತ ತನ್ನಯ ಹಿರಿಮೆಗಳ
ಸ್ವಚ್ಛ ಸಿಂಗಾರ ಮನೆ ಬೀದಿಗಳ ||೨|| 

ಅಮ್ಮನ ಘನ ರುಚಿಯ ಖಾದ್ಯಗಳು
ಗಮ್ಮತ್ತನ್ನು ಹೆಚ್ಚಿಸೋ ಕ್ರೀಡೆಗಳು
ಪ್ರಾರ್ಥನ ನರ್ತನ ನಲಿವಿನ ಗೀತೆಗಳು
ಸಹೃದಯರ ಪ್ರೀತಿ, ಹಾರೈಕೆಗಳು ||೩||

ಪಲ್ಲಕ್ಕಿ ದಿಬ್ಬಣಗಳ ಸಂಭ್ರಮ
ಊರೇ ಹರುಷದ ಅಂದಣ
ದಯೆ ಧಾರ್ಮ 
ದಯೆ ಧರ್ಮ ಜಾಗೃತಿ ಸಂಚಲನ
ಕಾಯಕವೇ ಬದುಕಿಗೆ ಸವಿ ಹೂರಣ ||೪||

ಮಹನೀಯರ ಅನುಭಾವ ತತ್ವಗಳು 
ಬೆಳಕಾಗಿ ಹರಿಯುತಿಹವು ಪ್ರತಿ ವರುಷವು 
ಸಾಧಕ ಬಾಧಕ ಬೇವು ಬೆಲ್ಲ
ಸಮರಸ ಗಟ್ಟಿಯಾಗಲಿ ಮೆಲ್ಲ ಮೆಲ್ಲ  ||೫||

By: ಹತ್ತಿಬೆಳಗಲ್ ನಾಗರಾಜ ರಾವ್

Comments[0] Likes[2] Shares[1]

Submit Your Comment

Latest Comments

No comments are available!