Poem

ಹಸಿದ ಹಸಿವು

ಅಗೋ... ಆ ಗುಡ್ಡದಾಚಿನಿಂದ
ಆಗೋ ... ಆ ಗುಡಿಯಿಂದ ಹತ್ತು ಮೈಲು ದೂರದಿಂದ
ಆ ಹೆದ್ದಾರಿಯಿಂದ ಇಪತ್ತು ಕಿ ಮೀ ದೂರದಿಂದ
ಪಡುಗಡೆಗೆ ಹದಿನೈದು ಮೈಲಿಂದ ಕಲಿಯುವ ಆಸೆಯ ಹೊತ್ತು
ರವಿಯು ಕೆಂಪು ಚೆಲ್ಲುವಾಗ ನಾವು ಶಾಲೆ ಕಾಲೇಜಿಗೆ ಬರುವೆವು 

ಮುಂಜಾನೆ ಮುಷ್ಠಿಯಷ್ಟು ಅವಸರದಿ ತಿಂದ ಅನ್ನ ನಗರಕ್ಕೆ ಬರುವುದರೊಳಗೆ ಕರಗಿ ಹೋಗುವುದು

ಸುಡು ಬಿಸಿಲು ನೆತ್ತಿಗೇರುತ್ತಿರುವಾಗ
ಕರಳುಗಳ ಕಾರ್ಖಾನೆ ಸದ್ದು ಮಾಡಲಾರಂಭಿಸುವುದು

ಹಸಿವು ಬೆಳೆಯಲಾರಂಬಿಸಿ ಊಟ ಬೇಕೆನಿಸಿದಾಗ ಜೇಬು ತಡವರಿಸಲು ಖಾಲಿ ಜೇಬು
ಇದ್ದರು ಹತ್ತಿಪ್ಪತ್ತಕ್ಕೆ ಅಪೌಷ್ಠಿಕ ಆಹಾರ
ಇದ್ದವರು ಅನಿಸಿದ್ದು ತಿನ್ನುವರು
ಇಲ್ಲದವರ ಆಸೆಯು ಬಾಯಿಯಲ್ಲೇ ಸತ್ತು ಹೋಗುವುದು

ಅಲ್ಲಿ ನೋಡು ಗೆಳೆಯ ಎಗ್ ರೇಸ್ ಗಮ್ ಎನ್ನುತ್ತೆ ಇಲ್ಲಿ ನೋಡು ಆ ಗೋಬಿ ಕೈ ಬೀಸಿ ಕರೆಯುತ್ತೆ ಆ ಬೇಕರಿ ಕೈ ಹಿಡಿದು ಎಳೆದಂತಾಗುತದೆ ಎಂದು ಸ್ನೇಹಿತನಿಗೆ ಹೇಳಿಕೊಂಡರು ಇಬ್ಬರ ಖಾಲಿ ಜೇಬು ಮುಖದ ರಕ್ತ ಇಂಗಿಸುವುದು

ಹೌದು ಉದರ ನಿಮಿತ್ತದ ಹಸಿವು ಆಹಾರದ ಪೌಷ್ಠಿಕತೆಯ ಯಾರೊಡನೆ ಕೇಳಲಿ....?

ಹಸಿದ ಹಸಿವಿಗೇನು ಗೋತ್ತು ಈ ನಮ್ಮ ಜೇಬುಗಳು ಹಸಿದಿವೆ ಎಂದು

 

By: ದಾಸ್ ರಂಗೇನಹಳ್ಳಿ

Comments[0] Likes[4] Shares[0]

Submit Your Comment

Latest Comments

No comments are available!