Poem

ಹೇಗೆ ಪ್ರೀತಿಸದಿರಲಿ ಚಂದಿರನನ್ನ

ನಾ ಬಲ್ಲೆ ಅವನನ್ನ
ನನ್ನ ಬಾಲ್ಯಾವಸ್ಥೆಯಿಂದ
ಕೈ ಗೆಟುಕದ ಆಟಿಕೆಯಾದವನ
ಯಾವಾಗಲು ಹೋದಲ್ಲಿ -ಬಂದಲ್ಲಿ ನನ್ನ ಜೊತೆಯಾದವನ
ಹೇಳಿ ಹೇಗೆ ಪ್ರೀತಿಸದಿರಲಿ ಚಂದಿರನನ್ನ

ಮರೆಯದ ಬೆಳದಿಂಗಳೂಟಕೆ ಸಾಕ್ಷಿಯಾದವನ
ಎಷ್ಟೋ ಏಕಾಂತ ರಾತ್ರಿಗಳಿಗೆ ಜೊತೆಯಾದವನ
ವಿರಹ ವೇದನೆಗೆ ಸಖಿಯಾಗಿ ಕೂಡಿದವನ
ಹೇಳಿ ಹೇಗೆ ಪ್ರೀತಿಸದಿರಲಿ ಚಂದಿರನನ್ನ

ಕೋಪಿಸಿ ಮುಖ ತೋರೆದು ನಾ ಮನೆ ಹೊಕ್ಕರು
ಬಿಡದೆ ಬೆಳಕಿನ ಕಿಂಡಿಯಲಿ ಇಣುಕಿ
ನಗಿಸಿ ಹೋಗುವವನ
ಹೇಳಿ ಹೇಗೆ ಪ್ರೀತಿಸದಿರಲಿ ಚಂದಿರನನ್ನ

ಮುನಿಸಿ ಕೊಳ್ಳುತ್ತಾನೆ ನನ್ನೊಂದಿಗೆ ಕೆಲವೊಮ್ಮೆ
ಬಾನಂಗಳದಿಂದ ಮರೆಯಾಗಿ
ತಮಸುರಿದು ಹೇದರಿಸುತ್ತಾನೆ ನನ್ನ
ಕೋಪ ಕ್ಷಣಿಕ, ಮತ್ತೆ ಬರುತ್ತಾನೆ
ಮೋಡಗಳ ಮರೆಯಿಂದ
ಹಾಲುಗಲ್ಲದ ಹುಡುಗಿ
ಫಳ್ಳೆಂದು ನಕ್ಕಾಂಗ
ಹೇಳಿ ಹೇಗೆ ಪ್ರೀತಿಸದಿರಲಿ ಚಂದಿರನನ್ನ

ಸುಖಃವೋ ದುಖಃವೋ
ಎಲ್ಲಾ ನೋವಿನ ನಲವಿನ ಪಾಲುದಾರನನ್ನ
ಹೇಳಿ ಹೇಗೆ ಪ್ರೀತಿಸದಿರಲಿ ಚಂದಿರನನ್ನ
 

By: ವಿಜಯಕುಮಾರ ಬಡಿಗೇರ

Comments[0] Likes[0] Shares[0]

Submit Your Comment

Latest Comments

No comments are available!