Poem

ಹೇಳಲೊಲ್ಲದು ಬದುಕು

ಹೇಳಲೊಲ್ಲದು ಬದುಕು ತನ್ನೆಲ್ಲ ಗುಟ್ಟುಗಳ ಸಹಿಸಲೊಲ್ಲದು ಮನವು ಬದುಕಿನ ಉಳಿ ಪೆಟ್ಟುಗಳ ಬದುಕು ನೋಡಲು ಚಂದ ನಿಂತು ಹೊರಗಿಂದ ಬದುಕ ಹೊರಟರೆ ಬೇಡವಾಗಲುಬಹುದು ಬದುಕಿನೊಳಗಿನ ಬದುಕು ಗಂಟಲಲ್ಲಿ ಇಳಿದಿದ್ದಷ್ಟೇ ಅನ್ನ ಉಳಿದಿದ್ದೆಲ್ಲಾ ಹಸಿಕಸ ಮರುದಿನ ಮಾತಾಡಿದ್ದಷ್ಟೇ ಶಬ್ಧ ಉಳಿದಿದ್ದೆಲ್ಲಾ ಕೇವಲ ಭಾವಯಾನ ಬಂಧ ಇದ್ದರಷ್ಟೇ ಶಬ್ಧಕೆ ಅರ್ಥ ಬಂಧವಿಲ್ಲದಿರದು ಬರಿ ಒಣ ಭಾಷಣ ಸಂಬಂಧವಿದ್ದರಷ್ಟೇ ಜೀವನ ಸತ್ಯಗಳು ಹಲವಾರು ಬದುಕ ಹಾದಿಯಲಿ ಕಂಡರೂ ಕಣ್ಣುಗಳು ಮರೆಯಬೇಕು ಕಾಣದಿರುವ ಹಾಗೆ ಮೆರೆಯಬೇಕು ತನಗೆ ದಕ್ಕದೆ ದಿನಕೆ ಕಾದು ಸೋಲುವ ಬದಲು ದಿನದಿ ಸಿಕ್ಕೆಲ್ಲ ಕ್ಷಣಗಳನು ಸಲಹಬೇಕು ಅರಿಯಬೇಕು, ತನ್ನೆಲ್ಲ ಇತಿಮಿತಿಗಳ ಒಪ್ಪಬೇಕು ತನ್ನದೇ ಹುಸಿಮಿತಿಗಳ ಅಳಿಸಬೇಕು ಸೋಲಿಲ್ಲದ ಕಾಲನ ಬಳಿ ಹೋಗಿ ನಾನು ಸೋತಿಲ್ಲ ಸತ್ತಿಲ್ಲ ಎಂದು ಬೀಗಬೇಕು

By: ವಿನಯ ಜೋಯಿಸ್

Comments[0] Likes[1] Shares[0]

Submit Your Comment

Latest Comments

No comments are available!