Poem

ಹೆತ್ತವರ ಋಣ

ಕಾಣುವ ದೇಹಕ್ಕೆ ಜನ್ಮವಿತ್ತವರಾರೋ
ಕಾಣದ ಮನಸ್ಸಿಗೆ ಹುಟ್ಟುನೀಡಿದವರಾರೋ
ಕಂಡರೂ ಕಾಣದ ಕಾಣದೆ ನೋಡುವ
ದೈವ ಶಕ್ತಿಗೆ  ಸಮನಾದವರಾರೋ.           ||೧||

ಮಗುವಿನ ಕಾಣದ ನೋವನ್ನು ಅರಿತವರಾರೋ
ಅದರ ಮುಗ್ಧ ಮನಸ್ಸನ್ನು ಬಲ್ಲವರಾರೋ
ತನ್ನೊಡಲಿಗೆ ನೀರನ್ನು ಅದರೊಡಲಿಗೆ ಗಂಜಿಯನ್ನು   ನೀಡಿದವರಾರೋ
ತಾ ಸತ್ತು ಮಗುವಿನ ಬದುಕಿಗೆ ಜೀವತೆತ್ತವರಾರೋ.   ||೨|| 

ತಾ ಜೀತದಾಳಿನಂತೆ ದುಡಿದು ನಿಮ್ಮ
ಸುಖಜೀವನವ ನೋಡಲು ಆಸೆಪಟ್ಟವರಾರೋ
ಎಲ್ಲ ಕಷ್ಟವನ್ನು ತಾನುಂಡು ನಿಮಗೆ
ಸಿಹಿಯ ಉಂಡೆಯ ನೀಡಿದವರಾರೋ.             ||೩||

ಸರ್ವತ್ಯಾಗಕ್ಕೂ ಸಿದ್ದರಾಗಿ
ನಿಮ್ಮ ಸುಖಕ್ಕೆ ಸಿದ್ದರಾಗಿ
ತಮ್ಮ ಜೀವನವನ್ನು ನಿಮ್ಮ ಏಳ್ಗೆಗೆ ಮುಡಿಪಿಟ್ಟು
ಕಾಣದೆ ಮರೆಯಾಗುವ ಹೆತ್ತವರ ಋಣ ತೀರಿಸುವರಾರೋ? 

By: ಮಂಜುನಾಥ್ ಎಸ್.

Comments[0] Likes[8] Shares[3]

Submit Your Comment

Latest Comments

No comments are available!