Poem

ಹೂ-ದುಂಬಿ

ಹೂಬನದೊಳಗೆ ದುಂಬಿಗಳಾಟ
ನಡೆದಿತು ಹಬ್ಬದ ರಸದೂಟ
ಸೆಳೆಯಲು ತಾ ಜಗದ ಕಣ್ಣೋಟ
ಮಾಡಲು ಸಕಲರಿಗೂ ಮಾಟ

ಝೇಂಕಾರ ದನಿ ದುಂಬಿಗಳಿಂದ
ಮೋಹಗೊಂಡಿತು ಸುಮವೃಂದ
ಮೆಲ್ಲನೆ ತೆರೆಯಲು ಮೊಗ್ಗಿನ ಕದ
ಸವಿಯಿತು ಭ್ರಮರ ಮಕರಂದ

ಬಾಡುವೆನೆಂಬ ಭಾವವ ಮರೆತು
ಅರಳಿತು ಸುಮ ಚೆಲುವ ಬೀರುತ
ಜಗದ ಮನವು ತಣಿಯಲಿ ಎನ್ನುತ
ನಗುತಲಿ ಸೌಗಂಧವ ಸೂಸುತ

ಬೈಗೊಳು ಮುದುಡಿ ನೆಲವನು ಸೇರಿತು
ಸಾರ್ಥಕ್ಯದ ಭಾವವ ತುಂಬಿ
ಸ್ವಾರ್ಥವೇ ತುಂಬಿದ ಮನುಕುಲಕೆ
ಪಾಠವ ಕಲಿಸಿತು ಹೂ-ದುಂಬಿ

By: ಸುಮಲತಾ ನಾಯ್ಕ

Comments[13] Likes[81] Shares[6]

Submit Your Comment

Latest Comments

ಕರಿಕೆ ನಾಯಕ್
Jul 10,2020

ಕವಿತೆ ತುಂಬಾ ಸೊಗಸಾಗಿದೆ.

Roopanath naik
Jul 08,2020

Sogasada salugalinda koodide nimma kavana.. heege sagali nimma sahitya payana..

Basavaraj
Jul 08,2020

👌🙏

santosh naik
Jul 08,2020

super...👌👌🎉

Rajesh Naik
Jul 08,2020

Nice poem 👌👌👌👌👌👌👌👌👌

Raghavendra Naik
Jul 06,2020

Super 👌🏻👌🏻👌🏻👌🏻

Narendra
Jul 06,2020

Nice one. Close to present situation.

Purushottam naik
Jul 06,2020

Super

Ramachandra
Jul 06,2020

Good

Ashwath
Jul 06,2020

Super mam, congratulations