Poem

ಹೊಸ ಅವತಾರ

ಕಣ್ಣೀರ ಪ್ರವಾಹ ಹರಿಯುತಿದೆ
ಬಡತನದ ಕಹಿಘಮ ಎಲ್ಲೆಲ್ಲೂ ಬೀರುತಿದೆ 
ತುತ್ತಿನ ಚೀಲಕಾಗಿ ಯುದ್ಧವೇ ಮೊಳಗುತಿದೆ
ಬಿಸಿಲಿನ ಬೇಗೆ ಬೆಳುದಿಂಗಳೆನೆ ಕಳೆಯುತಿದೆ
ಬೆಳಕಿದ್ದೂ ಕತ್ತಲೆಯು ತುಂಬುತಿದೆ 
ಶಬ್ಧದ ಹಿಂದಿನ ನಿಶ್ಶಬ್ಧ ಗೌಣವಾಗುತಿದೆ

ಹೆಮ್ಮಾರಿಯು ಊದುತಿದೆ ರಣಕಹಳೆ
ಬೃಹತ್ನಗರಗಳ ಕಾವಬೇಗೆಯಲಿ ಬೆಂದವರು ಹೊರಟೇ ಹೊರಟಿದ್ದಾರೆ ಗುಳೆ 
ಆದರೂ ಚತುರ್ಮುಖ ಬ್ರಹ್ಮನು ತಲ್ಲೀನ 
ಶಾರದೆ ನುಡಿಸುವ ಇಂಚರದ ಪ್ರಾಣತಂತುವಿನಲೆ
ಶಿವೆಯಿಲ್ಲದೆ ಇರದ ಶಿವನಂತೂ ಮಗ್ನ 
ಅರ್ಧಾಂಗಿಯ ಕೂಡೆ ಸಲ್ಲಾಪದಲೆ 
ಹೃದಯಕಮಲದಲ್ಲೇ ಲಕ್ಷ್ಮಿಯನ್ನಿರಿಸಿಕೊಂಡ ಪದ್ಮನಾಭನು ನಗುತಿಹನು ಸುಖ ನಿದ್ರೆಯಲೆ

ಶಂಖ-ಚಕ್ರ, ತ್ರಿಶೂಲಗಳು ಸಾಲುತಿಲ್ಲ 
ಅಸುರನ ಸಂಹಾರಕೆ 
ಯಾವ ವಿರಾಟ್ ಸ್ವರೂಪದವತಾರ ತಾಳುವನೋ ಕಾಣೆ 
ಈ ದೈತ್ಯನ ನಿರ್ನಾಮಕೆ 
ಕಾದೇ ಕಾಯಬೇಕಿದೆ ಆ ಕ್ಷಣಕೆ......

By: ಪ್ರಿಯಾಂಕ ಚಕ್ರಧರ

Comments[3] Likes[9] Shares[2]

Submit Your Comment

Latest Comments

H R YASHASWINI
Jul 08,2020

All The Best priyankha keep going. God bless you.

Shree
Jul 06,2020

Nice

Karan
Jul 06,2020

👌👌