Poem

ಇದು ಸರಿಯೆ ?

ಇದು ಸರಿಯೇ? 

ಅನ್ನ ಮಾರಲು ಬಹುದು
ನಾಚಿಕೆ ಇಲ್ಲ

ಭೂಮಿ ಮಾರಲು ಬಹುದು
ಸಂಚಕಾರವಿಲ್ಲ

ಬುದ್ದಿ ಮಾರಲುಬಹುದು
ಅಂಜಿಕೆ ಇಲ್ಲ

ವಿದ್ಯೆ ಮಾರಲು ಬಹುದು
ಮಾನ ಮರ್ಯಾದಿ ಇಲ್ಲ

ಸಂತಸ ಮಾರಲು ಬಹುದು
ಸಂಕೋಚವಿಲ್ಲ

ಏನೋನೋ ಮಾಡಬಹುದು,
ಮಾರಬಹುದು
ಆಚಾರವಿಲ್ಲ ವಿಚಾರವಿಲ್ಲ..

ಅವಕಾಶವೋ ಅವಕಾಶ..

ಮೈ ಮಾತ್ರ ಮಾರುವಂತಿಲ್ಲ ಅದು ವ್ಯಭಿಚಾರ..!!

ಸೋಜಿಗವಿದು ವಿಪರ್ಯಾಸವಿದು..


ಬುದ್ದಿ  ಮನಗಳಿಗಿಂತ ಅಗ್ಗ ವಲ್ಲವೇ ಇದು..

ಆದರೆ

ಜಗತ್ತಿನಲಿ ಆಗುವುದು ಧಾರಾಳವಾಗಿ ಮನಸ್ಸಿನ ವ್ಯಾಪಾರ..!!

ಈ ಮೈ ಮನಗಳ ಸುಳಿಯಲ್ಲಿ ತಲೆಸುತ್ತಿದೆ 
ತೊಳಸುತ್ತಿದೆ..

ಏನೀ ಜನ ಸಮಾಜ ಅರ್ಥವಾಗುತಲಿಲ್ಲ..

By: ಮಹೇಂದ್ರ ಹೆಗಡೆ ಸಂಕಿಮನೆ

Comments[2] Likes[15] Shares[0]

Submit Your Comment

Latest Comments

MANJUNATH
Jul 16,2020

ಅಂಕು ಡೊಂಕಿನ ದುನಿಯಾ.... ಉತ್ತರವಿಲ್ಲದ ಪ್ರಶ್ನೆಗಳೇ ಜಾಸ್ತಿ..

Priya Hegde
Jul 06,2020

A poem with many hidden meanings and messages.... competent poet..