Poem

ಜಾರದಿರು ಮನವೆ

ಜಾರದಿರು ಮನವೆ


ಹೇ ಬೆಳಕೆ ಏಕಿಷ್ಟು ಮೌನವಾಗಿರುವೆ
ಭಾವನೆಯ ಎದೆಯೊಳಗೆ ನೂಕುವ ಕಾಲವನು ಅದೆತಕೆ ತಡೆಯುತ್ತಿರುವೆ

ಸುತ್ತಲು ಕಾರ್ಗತ್ತಲ ಮೌನವಾವರಿಸಿರುವಾಗ! ಮತ್ತೆಕೆ ಬಂದು ಬಾರದಂತೆ ಮರೆಯಾಗುವ ಆಸೆ ನಿನಗೆ
ಕರಿಮೋಡಗಳ ನಡುವೆ ಸುಳಿದು ಮಾಯಾಂಗನೆಯಂತೆ ಮರೆಯಾಗುವ ನೀ ಮಾತನಾಡದೆ ಅದೆತಕೆ ಈ ತಂಗಾಳಿಯವ ಇಳಿ ಸ್ಪರ್ಶದಲಿ ಹಾಗೆ ಕುಳಿತಿರುವೆ...ಮೆಲ್ಲನೆ ಮಾತನಾಡು ನನ್ನೊಂದಿಗೆ ನೀನಾದರು...ಪ್ರೀತಿಯಿಂದ


ಅದೆಕೆ ಬಂದಿಖಾನೆಯಲ್ಲಿ ಮೌನವಾಗಿ ಕುಳ್ಳಿರಿಸಿರುವೆ ಪಿಸುಮಾತನಾಡದೆ.
ಮೆಲ್ಲಗೆಜಾರುವ ಮನಸ್ಸಿಗೇತಕೆ ನೀರೆರೆಯುವ ಆತುರ ನಿನಗೆ.
ಕಲ್ಲಾಗಿ ಹಿಡಿರುವ ಹಠವು ಕರಿಗಿತೆ ಬಿಸಿಯುಸಿರಿಗೆ.
ಹೇಳಿಬಿಡು ಧ್ವನಿಯಲ್ಲಡಗಿರುವ ಮನಸ್ಸಿನ ಮೌನದ ಕಥೆಯ ಮುಕ್ತಮುಕ್ತವಾಗಿ.


ಖಾಲಿ ಹಾಳೆಯ ಕಸವೊಂದು ಕೂತಿದೆ ಎದೆಯಲ್ಲಿ ಅದು ಮುಂದೊಂದು ದಿನ ಗಾಳಿಪಟವಾಗಿ ಹಾರಬಲ್ಲದು
ಎದೆಯುಸಿರಿನೊಂದಿಗೆ ಪ್ರತಿಯುಸಿರಾಗಿ
ಕಣ್ಸನ್ನೆಯ ಮೌನದಲ್ಲೆ ಎಲ್ಲವನ್ನು ಅರ್ಥೈಸಿದೆ ಎದೆಯಭಾವ ಬಿರಿಗಳನ್ನು.
ನೋಡುತ್ತಿದೆ  ಕಾಜಾಣ ಹಾರಿ ಹೊಗಲೂಬಹುದು...

By: ಬಸವರಾಜ ಹೇಮನೂರು

Comments[0] Likes[0] Shares[0]

Submit Your Comment

Latest Comments

No comments are available!