Poem

ಜೀವನ ಸಾರ

ಜೀವನ ಸಾರ

ಇರುವದನ್ನು ಸ್ವೀಕರಿಸು
ಬೇಡ ಇಲ್ಲದ ಲೋಭ;
ಅತಿ ಆಸೆಗಳ ಕಟ್ಟಿಹಾಕಿ
ಬಯಸದಿರು ನಮ್ಮದಲ್ಲದ ಲಾಭ!!

ಪ್ರತಿ ವೈಫಲ್ಯದಲ್ಲೂ ಉಂಟು 
ಜೀವನದ ಬಹುದೊಡ್ಡ ಪಾಠ;
ಬೇಕು ಸೋಲಿನಲ್ಲೂ ಸಾರವ 
ಹುಡುಕುವ ಪರಿಪಾಠ!!

ಅರಿಯಬೇಕಿದೆ ನಾವೆಲ್ಲ
ಸೋಲೇ ಗೆಲುವಿನ ಸೋಪಾನ;
ಅರಿತು ನಡೆಯಬೇಕು
ಸೋಲಿಗೆ ಔಷಧಿಯಲ್ಲ ಪಾನ!!

ಬೇಡ ಬೇಸರ, ಬೇಕಿಲ್ಲ 
ಎಲ್ಲದಕು ಅವಸರ;
ಮೆಟ್ಟಿ ನಿಲ್ಲು ಹೊಡೆದೋಡಿಸಲು 
ಕಷ್ಟಗಳೆಂಬ ಅಸುರ!!

ಸೋತರೆನಂತೆ, ಹುಡುಕಬೇಕು
ಗೆಲುವಿನ ರಹದಾರಿ;
ಇಹುದಲ್ಲವೆ ನಮಗೆ ನಮ್ಮ 
ಜೀವನದ ಜವಾಬ್ದಾರಿ?

ದಿಟ್ಟ ಕನಸನ್ನು, ಗಟ್ಟಿ ಮನದಿ
ಕಾಣಬೇಕು ಮನುಜ;
ಹೋಗುವಾಗ ಗೆಲುವಿನ ಬೆಂಬತ್ತಿ 
ಸೋಲು ಕೆಲವೊಮ್ಮೆ ಸಹಜ!!

 

By: ಮಹಾಂತೇಶ ಮಾಗನೂರ

Comments[3] Likes[6] Shares[1]

Submit Your Comment

Latest Comments

BIREN KUMAR SAHOO
Jul 06,2020

Nice

Vidya Shashidhar Moji
Jul 06,2020

Very well expressed

Chaitra Shivayogimath
Jul 06,2020

ಚಂದದ ಕವನ! ಅಭಿನಂದನೆಗಳು 💐ಪ್ರಾಸಗಳು ಸೊಗಸಾಗಿವೆ!