Poem

ಕಾಗದದ ದೋಣಿ

ಕಾಗದದ ದೋಣಿಯೇರಿದ ಮನ ಬಾಲ್ಯದ ದಿನಗಳತ್ತ ನಡೆಸುತ್ತಿದೆ ಸವಾರಿ..!!

ಕಳೆದ ನಿನ್ನೆಗಳ ಬರುವ ನಾಳೆಗಳ ಹಂಗಿಲ್ಲದೆ ಅನುಮಾನ ಅವಮಾನ ಆತಂಕಗಳ ಅಡೆತಡೆಗಳಿಲ್ಲದೆ ಸಾಗುತ್ತಿದ್ದ ದಿನಗಳವು..!!

ದುಃಖ ದುಗುಡ ದುಮ್ಮಾನಗಳ ಬಂಧನಗಳಿಲ್ಲದೆ 
ಚಿಂತೆ ನಿರೀಕ್ಷೆ ಆಸೆಗಳ ಪರಿಚಯವಿಲ್ಲದೆ 
ನಡೆದು ಬಂದ ದಾರಿಯದು..!!

ಬದುಕಿನ ಜಂಜಡಗಳಿಗೆ ಸಿಲುಕಿ ಜಡವಾಗದೆ 
ಎಲ್ಲಾ ಎಲ್ಲೆಗಳ ಮೀರಿ ಬೆಳೆದು 
ಸದಾ ಸ್ನಿಗ್ಧ ಮುಗ್ಧ ನಗುಮೊಗವ ಹೊತ್ತು ಕಾಲ್ಪನಿಕತೆಯನ್ನೇ ಬದುಕಾಗಿಸಿಕೊಂಡಿದ್ದ ಮುಗ್ಧತನವದು..!!

ಸತ್ತ ಕನಸು,ಸೋತ ಮನಸು,ಯಾಂತ್ರಿಕ ಬದುಕಿನಿಂದ ಬೇಸತ್ತ ಮನಕಿಂದು
ಒತ್ತಿ ಬರುತಿದೆ ಮತ್ತೆ ಬಾಲ್ಯದ ಓಣಿಯೇರಿ ಓಡುವ ತಹತಹಿಕೆ..!!

By: ಸೌಮ್ಯಶ್ರೀ ಬಲ್ಲಾಳ್

Comments[0] Likes[1] Shares[0]

Submit Your Comment

Latest Comments

No comments are available!