Poem

ಕಾನನದ ಹಾಡು


ಹಾಡುಗಳ ದಟ್ಟಕಾಡಿನಲ್ಲಿ ಸಂಚರಿಸುತ್ತಿರುವೆ.

ಗಿರಿಕಂದರಗಳ  ಏರಿಳಿತಗಳ ನಡುವೆ
ಆಲಾಪನೆಗಳ ಸೊಗಸು ಸವಿದಿದೆ

ನೀರ ಝರಿಯಲ್ಲಿ ತುಂಬಿತುಳುಕುವ ವಯ್ಯಾರದಂತ ಹಾಡು ನಾಡಾಗಿದೆ.

ಬಳಕು ಬಳ್ಳಿಗಳನಡುವೆ ಇನ್ನೊಮ್ಮೆ
ಹಾಡಲು ಮನಸು ಹಾತೊರೆದಿವೆ.


ಸರಿದ ಹಾದಿಯಲ್ಲಿ ಹಾವು ಮುಂಗುಸಿಗಳ ವ್ಯರ್ಥ ಹೋರಾಟ
ನಡೆದಿದೆ.

ಅರ್ಥವಾಗದ ಕಾನನದ ಮೌನಗಳು
ಇನ್ನೊಮ್ಮೆ ಮುದಗಟ್ಟಿವೆ.

ರುದ್ರರಮಣೀಯ ಹಸಿರುಗಳ
ಸಂತಸವು ರಕ್ತ ರಾಗವಾಗಿದೆ

ಮುಸ್ಸಂಜೆಯಲಿ ರಾತ್ರಿ ನೋಡುವ ಮುನ್ನ ಮನವು ಚಿಟ್ಟೆಯಾಗಿದೆ.

ಘೋರ ರಾತ್ರಿಗಳ ನಿರವತೆಗೆ
ಮೌನ ಸಾಕ್ಷಿಯಾಗಿದೆ.
 

By: ದಿವಾಕರ್ ಶೆಟ್ಟಿ ಅಡ್ಯಾರ್

Comments[0] Likes[1] Shares[0]

Submit Your Comment

Latest Comments

No comments are available!