Poem

ಕನ್ನಡಿ ಒಳಗನ್ನಡಿ

ಕನ್ನಡಿಯು ಕೇಳುತಿದೆ
ಇದೇನಾ ನಿನ್ನ ನಿಜರೂಪ??? 
ಅಂತರಾಳದ ಕನ್ನಡಿ
ತೋರಿಸುವುದು ನಿನ್ನ ಸ್ವರೂಪ

ಹೊರಗನ್ನಡಿ ತೋರಿಸುತಿದೆ
ವಿಭಿನ್ನ ಮುಖವಾಡದ ಮುಖ
ಒಳಗನ್ನಡಿ ತೋರಿಸುವುದು
ಸುಂದರ, ಪರಿಶುದ್ಧ ಮುಖ

ಹೊರಗನ್ನಡಿಗೆ ತಿಳಿಯದು
ನಿನ್ನ ಅಸೂಯೆ ದ್ವೇಷದ ಚಿತ್ರ
ಒಳಗನ್ನಡಿ ತಿಳಿಸುವುದು
ನಿನಗೆ ಪ್ರೀತಿ, ಕರುಣೆಯ ಚಿತ್ರ

ನಂಬಿ ನಡೆ ಒಳಗನ್ನಡಿಯನು 
ತಪ್ಪು ತೋರಿಸಲಾರದು ಅದು
ಆಗ ಕನ್ನಡಿಯೂ ಹೇಳುವುದು
ಇದು ನಿನ್ನ ನಿಜ ರೂಪ
ಇದು ನಿನ್ನ ನೈಜರೂಪ

By: ವನಜಾ ಪುರೋಹಿತ್‌

Comments[0] Likes[6] Shares[0]

Submit Your Comment

Latest Comments

No comments are available!