Poem

ಕವಿತೆ ಬೇಕಾಗಿದೆ

ಕವಿತೆ ಬೇಕಾಗಿದೆ
ಎದೆಯ ಗೂಡಿನ 
ತೊಳಲಾಟದ ಮಾಪಕವಾಗಿ 
ರಮ್ ಕುಡಿದ ಕುದುರೆಯಂತೆ
ಹುಚ್ಚೆದ್ದು ಓಡುವ 
ಮನಸಿಗೊಂದು ಲಾಗಮಿನಂತೆ

ಕವಿತೆ ಬೇಕಾಗಿದೆ
ಭಾವಗಳ ಅಪ್ಡೇಟ್ ಮಾಡುವಂತದ್ದು
ಕನಸುಗಳ ಯ್ಯಾಂಡ್ರಾಯ್ಡ್ ವರ್ಷನ್ 
ಬದಲಿಸುವಂತದ್ದು

ಕವಿತೆ ಬೇಕಾಗಿದೆ
ಸಂಭಂದಗಳ ನಡುವೆ಼
ಸತ್ಯತೆಯ ಉಳಿಸುವಂತದ್ದು
ಅಸತ್ಯತೆಯ ಮುಖವಾಡ 
ಕಳಚುವಂತದ್ದು

ಕವಿತೆ ಬೇಕಾಗಿದೆ
ನಾನೆಂದು ಅರಿಯುವುದಕ್ಕೆ
ನನ್ನೊಳಿಹ ನಿನ್ನನ್ನು ತಿಳಿಗೊಳಿಸಲಿಕ್ಕೆ

ಅತಿ ತುರ್ತಾಗಿ ಕವಿತೆ ಬೇಕಾಗಿದೆ 
ಮನದೊಳಗೆ ತುರ್ತು ಪರಿಸ್ಥಿತಿ 
ಘೋಷಿಸುವ ಮೊದಲು
ಕವಿತೆ ಬೇಕಾಗಿದೆ ತುರ್ತಾಗಿ ಕವಿತೆ ಬೇಕಾಗಿದೆ

     

By: ದಾಸ್ ರಂಗೇನಹಳ್ಳಿ

Comments[8] Likes[19] Shares[13]

Submit Your Comment

Latest Comments

Manjunath gh
Jul 12,2020

Kavanq

RajanijaR
Jul 10,2020

ಅದ್ಭುತ ಸಾಲುಗಳು 👏👏👏👏👌

Basava
Jul 09,2020

Its true

Sakra Nanu
Jul 09,2020

ಸೂಪರ್

Dasara devaraja
Jul 08,2020

Superb

Thippu
Jul 06,2020

👌👌👌👌👌👏👏👏👏👏👏👏you always rockkkkk

Ashu
Jul 06,2020

super👌👌