Poem

ಕೊನೆ ಎಂದೊ .....

ನಿರೀಕ್ಷೆ ಮಾಡಿರಲಿಲ್ಲ ಯಾರೂ
ಜಗತ್ತು ಹೀಗೆ ತಲ್ಲಣಗೊಳ್ಳುತ್ತದೆಂದು
ಮನುಷ್ಯ ಪ್ರಕೃತಿಯ ಬಂಧಿಯಾಗದೆ
ತನ್ನೊಳಗೆ ತಾನೆ ಬಂಧನಕ್ಕೊಳಗಾಗಿದ್ದಾನೆ।।

ನಿಜದ ಅರಿವು ಈಗಾಗುತ್ತಿರಬಹುದು
ಆದರೆ.
ಪ್ರಕೃತಿ ಎಷ್ಟು ಅಂತ ಸಹಿಸೀತು?
ಮನುಷ್ಯನ ನಿಸರ್ಗಾತೀತ ಬದುಕಿನ ರೀತಿಯನ್ನು
ಬದಲಾಗಲೆ ಬೇಕಲ್ಲ ಜೀವನ ಕ್ರಮ
ಬದಲಾವಣೆ ಜಗದ ನಿಯಮವಲ್ಲವೆ

ಹುಟ್ಟಿದವರು ಮರಣಿಸಲೇಬೇಕು 
ಆದರೆ. 
ಮರಣವು ಭಯ ಹುಟ್ಟಿಸಿ ಬಂಧಿ ಮಾಡಿತಲ್ಲ
ಮರಣ ಮಹಾನವಮಿಯಾಗಬೇಕು 
ಮಹಾಮಾರಿಯಾಗಬಾರದು

ನಿನ್ನೊಳಗೆ ಎಲ್ಲವೂ ಇದೆ
ಬೇಕಾದದ್ದು ಬೇಡವಾದದ್ದು
ಪೂರಕವೂ ಮಾರಕವೂ
ನೀನು ಆರಿಸಿಕೊಂಡಿದ್ದು ಮಾತ್ರ
ಇತಿಯಿರದ ಮಿತಿಮೀರಿದ
ಬದುಕಿನಾಚೆಯ ದೂರವನ್ನು

ಈ ಸೃಷ್ಠಿಯ ಅನಂತತೆಯಲ್ಲಿ
ನಿನ್ನಂತೆ ಎಷ್ಟೋ 
ಜೀವ ಸಂಕುಲಗಳಿವೆಯಲ್ಲ
ಅವುಗಳ ಬದುಕು ಸೃಷ್ಟಿಕರ್ತನ ನಿಯಮದಂತೆ
ನೀನು, ನಾನೆ ಸೃಷ್ಟಿಕರ್ತನೆಂದು ಮೆರೆದೆ
ಚಂದ್ರನನ್ನೊ, ಮಂಗಳನನ್ನೊ ಮುಟ್ಟಿದ ಅಹಂಮಿನಲ್ಲಿ

ಚಂದ್ರನ ಮೇಲೇನೋ ನಿಂತುಕೊಂಡೆ
ಆದರೆ. 
ನಿನ್ನಂಗಳವನ್ನೆ ಮರೆತುಬಿಟ್ಟೆಯಲ್ಲ
ನಿನ್ನಂತರಂಗದ ದಿವ್ಯ ಪ್ರಭೆಯನ್ನು ಬಿಟ್ಟು
ಯಾವುದೋ ಕೃತಕ ದೀಪದ ದಾರಿಯಲ್ಲಿ ನಡೆಯುತ್ತ
ದೀಪ ಆರಿಹೋಗಿ ದಾರಿಗಾಣದೆ ನಿಂತುಬಿಟ್ಟೆಯಲ್ಲ

ಈಗ ಅರಿವಾಗುತ್ತಿದ್ದೆಯಲ್ಲ ನಿನಗೆ
ನಾನು ತಪ್ಬು ಮಾಡಿದೆನೆಂದು
ಅಂತರಂಗದ ಮಾತು ಕೇಳಬೇಕಿತ್ತು ನಾನೆಂದು
ಈಗೇನು ಮಾಡಲಿ ದೇವರೆ?
ಕಾರ್ಗತ್ತಲೆಯ ಮಡುವಿನಲ್ಲಿ ಸಿಲುಕಿಕೊಂಡೆನಲ್ಲ
ಮರಳಿ ಹೋಗಬೇಕೆಂದರೂ ಬಂದ ದಾರಿ ಮರೆತು ಹೋಗಿದೆ
ಮುಂದಿನ ದಾರಿ ಮೊದಲೆ ಗೊತ್ತಿಲ್ಲ

ಸುತ್ತುವರೆದಿದೆ ಕತ್ತಲೆ ಚಕ್ರವ್ಯೂಹದಂತೆ
ದಾಟಿ ಬರಲು ಹೋರಾಡುತ್ತಿರುವೆ ಅನುಕ್ಷಣವು
ಎದೆಯಲ್ಲಿ ತಲ್ಲಣ, ಮನದಲ್ಲಿ ಭಯ
ಯಾವ ಗಳಿಗೆಯಲ್ಲಿ ಏನಾಗುವುದೋ ಎಂಬ ಆತಂಕ
ಇದಕ್ಕೆ ಕೊನೆ ಎಂದೋ......
                 

By: ಸುರೇಶ ಮುದ್ದಾರ

Comments[6] Likes[43] Shares[15]

Submit Your Comment

Latest Comments

ಿಲಗಳಮ .ಿಬ .್ನಎagalaM .B .BN
Jul 09,2020

ಮನುಷ್ಯನ ಅಹಂ ಮತ್ತು ಪ್ರಸ್ತುತ ಸಂದಿಗ್ಧ ಪರಿಸ್ಥಿತಿಯ ವ್ಯಂಗ್ಯ ಚಿತ್ರಣ ಕಾವ್ಯದಲ್ಲಿ ಉತ್ತಮವಾಗಿ ಮೂಡಿ ಬಂದಿದೆ

Mr.DEVINDRA S PATTAR
Jul 08,2020

Super

G. A. Pattar. Rtr Art Master. Ghataprabha
Jul 08,2020

ಮಾನವನ ಬದುಕಿನ ಮೇಲೆ ನಡೆದ ಸಾಮೂಹಿಕ ಕೊವೀಡ್19 ಕರೊನಾವೈರಸ್ ದಾಳಿ ನಡೆಸಿದ ಸಂದರ್ಭದಲ್ಲಿ ರಚಿಸಿದ ಕವಿತೆ ಚೆನ್ನಾಗಿದೆ ಮಾನವ ತನ್ನ ಅಮಾನವೀಯ ಕೃತ್ಯಕ್ಕೆ ತೆರಬೆಕಾದ ಕಾಲ ಬಂದಿದೆ ಭೂಮಿ ತಾಯಿ ಎಷ್ಟು ದಿನ ಅಂತ ಹೀಗೆ ಸಹಿಸಿಕೊಂಡು ಸುಮ್ಮನಿದ್ದಾಳು ಮಾನವತನ್ನ ಪೈಸಾಚಿಕ ಕೆಲಸಕ್ಕೆ ಇಂದು ಬೆಲೆ ತೆರಬೆಕಾದ ಪರಿಸ್ಥಿತಿ ಬಂದಿದೆ ಎಂದು ಕವಿ ಮುದ್ದಾರ

SEEMA SEEMA
Jul 08,2020

The poem explains about the life which we are leading should have satisfaction in our work and its necessary to enjoy each and every moment instead of wasting the precious time which is been given to us in many millions of species. It also explains the technological approach towards everything but we are forgetting ourselves the HAPPINESS RELATIONSHIPS FAMILY .....we human may be thinking that we have gained power over everything but we need to think that there is supreme soul which is guiding each and every organism in this universe ........we need to take a minute to read this poem which is beautifully explained the meaning of our life and need to get satisfaction in our own work..... Thanks for the poet for giving such a beautiful poem to the readers which is necessary to know at this minute of our life ....Thank you sir!!

N.B.Nesaragi
Jul 08,2020

Superb ಕವಿತೆ ತುಂಬಾ ಸುಂದರವಾಗಿದೆ .

RAJU KALAL
Jul 08,2020

ಸೂಪರ್ ಅಣ್ಣಾ