Poem

ಕ್ರಾಂತಿ ಎಂದರೆ ಕಲ್ಲಲ್ಲ

ಕ್ರಾಂತಿ ಕಲ್ಲಲ್ಲ

ಕ್ರಾಂತಿಯಿಂದಾದರೂ
ಶಾಂತಿಯಿಂದಾದರೂ
ನೀನಿರಬೇಕು ಅಲ್ಲಿ
ನೆಲಕಚ್ಚಿ ನಿಲ್ಲಬೇಕು
ನೀ ಅಲ್ಲಿ...
ಕ್ರಾಂತಿಯಲಿ ಕಿಚ್ಚು
ಶಾಂತಿಯಲಿ ಮೆಚ್ಚು
ಮರೆಯಾದರೇ ನೋಡು
ಮಾತಾನಾಡ್ವರು ಕೇಳು
ಶಾಂತಿಯಿಂದೇನಾದಿತು
ಕ್ರಾಂತಿಯಿಂದೇನಾದಿತು
ಆಡ್ವರ ಮಾತಿನಿಂದೇನಾದೀತು ?
ನಡೆ ಮುಂದೆ ನೀನು
ತಲೆ ತಗ್ಗಿಸಿ ನೋಡದಿರು ಎಂದೆ
ನೀ ಬಿದ್ದರೆ ಬಾಳಬಹುದು
ನಿನ್ನವರೆಲ್ಲಾ ಬಿದ್ದಾಗ ಬಾಳಬಹುದೇ
ಕ್ರಾಂತಿ ಅದು ಬರೀ ಕಲ್ಲಲ್ಲ
ಶಾಂತಿ ಅದು ಬರೀ ಮಂತ್ರವಲ್ಲ

By: ಮಧುಕುಮಾರ್ ಎನ್.

Comments[1] Likes[3] Shares[0]

Submit Your Comment

Latest Comments

ಸುಷ್ಮಾ ಬಿ. ಎಸ್.
Jul 08,2020

ಸೊಗಸಾದ, ಭರವಸೆ ಮೂಡಿಸುವ ಕವನ 👌