Poem

ಕ್ಷಮಿಸು ನಾಗರಿಕ

ಕ್ಷಮಿಸು ಕಾರ್ಮಿಕ
ನೀನಾಗಿರಬಹದು ನಿರ್ಗತಿಕ
ನಾನೀಗ ಚಪ್ಪಾಳೆ ತಟ್ಟಬೇಕು!
ಕ್ಷಮಿಸು ಕಾರ್ಮಿಕನ ಹಸಿಗೂಸೇ
ನಿನಗಾಗಿರಬಹುದು ಹಸಿವು
ನಾನೀಗ ಜಾಗಟೆ ಬಾರಿಸಬೇಕು!

ಕ್ಷಮಿಸು ಬಡಮಾತೆ
ನಿನಗಿಲ್ಲದಿರಬಹುದು ಅನ್ನ
ನಾನೀಗ ಹಚ್ಚಬೇಕು ದೀಪವನ್ನ!

ಕ್ಷಮಿಸು ವಲಸೆ ಶ್ರಮಿಕ
ನಿನಗಿಲ್ಲದಿರಬಹುದು ಸೂರು
ನನ್ನ ಗಂಟೆ ಬಾರಿಸುವಿಕೆ ಈಗ ಜೊರು!

ಕ್ಷಮಿಸು ಅಲೆಮಾರಿ ಕಾರ್ಮಿಕ
ನಿನಗಿಲ್ಲದಿರಬಹುದು ಬಸ್ ಚಾರ್ಜು
ನಾನೀಗ ಉಚಿತ ವಿಮಾನ ರೆಡಿ ಮಾಡಬೇಕು!

ಕ್ಷಮಿಸು ವೈದ್ಯ ನಾರಾಯಣನೆ
ನಿನಗಿರಬಹುದು ಕರ್ತವ್ಯ
ನನ್ನ ಬಳಿ ಇಲ್ಲ ಸಲಕರಣೆ

ಕ್ಷಮಿಸು ನರ್ಸ್-ಅಮ್ಮ
ನೀ ಸಿದ್ಧಳಿರಬಹುದು ಸೇವೆಗೆ
ನನ್ನ ಬಳಿ ಈಗಿಲ್ಲ ಕೈಗವಸು!

ಕ್ಷಮಿಸು ನೀ ಉದ್ಯಮಿ
ನಿನಗೇನೂ ಕೊಡಲಾರೆ
ವೇತನ ಕೊಡು ಎಂಬ ಉಪದೇಶ ಬಿಟ್ಟು!

ಕ್ಷಮಿಸು ಚಾಲಕನೇ
ನಿನ್ನ ಲಾರಿ ಖಾಲಿ
ನನಗೀಗ ನಿನ್ನಿಂದ ಟೋಲ್ ಬೇಕೇಬೇಕು!

By: ಸಂಗಮೇಶ ಮೆಣಸಿನಕಾಯಿ

Comments[0] Likes[4] Shares[0]

Submit Your Comment

Latest Comments

No comments are available!