Poem

ಕೂಗಲೊಂದು ಹೆಸರು ಕೊಡು

 

 

ಇರುವೆಲ್ಲ ಕಷ್ಟವಲ್ಲದಿದ್ದರೂ 
ಕೊಡು ಎನಗೆ ತಡೆಯುವಷ್ಟಾದರು
ತಡೆಯಲಾಗದಿರೆ ಕೂಗಿಡುವೆ ಹೆಗಲು ಕೊಡು 
ಕೂಗಲೊಂದು ಹೆಸರು ಕೊಡು

ಮೂಗನಾಗಿಬಿಡು ನನ್ನ ಕಷ್ಟ ಕಾಲದಲಿ
ಕಿವುಡನಾಗಿಬಿಡು ಕೆಲಕಾಲ ಕಷ್ಟ ಹೊಸದಿದ್ದಾಗ
ಕಷ್ಟಗತಿಸಲಿ ಸ್ವಲ್ಪವಾದರೂ ಹೇಗೋ
ಗತಿಸುವವ ನೀನೇ ನನ್ನ ಕೊನೆಗಾಲದಲಿ

ಹದಕೆ ಬರುವವರೆಗು ಹದದಲ್ಲೆ ಕಾಯಿಸು
ಸೀದು ಹೋಗುವ ಮುನ್ನ ಮಗುಚಿ ಮತ್ತೊಮ್ಮೆ ಬಾರಿಸು
ನೋಡಲು ಹೊರಗಿಂದ ಸುಡಲೂ ಯೋಚಿಸದಿರು
ಒಳಗಿಂದ ಅರೆಬೆಂದ ಹಿಟ್ಟಿನಂತೆ ಉಳಿಸದಿರು

ಕಷ್ಟ ನೀಡುವುದಕೆಲ್ಲ ನೀ ಜುಗ್ಗನಾಗದಿರು
ತಡೆದು ಬದುಕಕಾಗದಷ್ಟು ನಾ ಜೊಳ್ಳೇನಲ್ಲ
ಆಗೊಮ್ಮೆ ಈಗೊಮ್ಮೆ ಕಣ್ಣು ಮೇಲ್ ನೋಡಬಹುದು
ಆದರೆ ಕಷ್ಟಕೆ ಹೆದರುವವನಲ್ಲ ನೀನಿದ್ದರೂ ಇರದಿದ್ದರೂ

By: ವಿನಯ ಜೋಯಿಸ್

Comments[0] Likes[5] Shares[1]

Submit Your Comment

Latest Comments

No comments are available!