Poem

ಮಧುಪಾತ್ರೆ

ನಿನ್ನ ಪ್ರೇಮದ ಮಧು ಪಾತ್ರೆಯಲಿ
ಅನಂತದವರೆಗೂ ತೇಲಿಸಿ ಬಿಡು
ಎನ್ನಲಿರುವ ವಿಷವೆಲ್ಲ ಬಾನಂಗಳದವರೆಗೂ
ಬಾಷ್ಪೀಕರಣವಾಗುವ ತನಕ

ಸುಟ್ಟು ಬಿಡು ನಿನ್ನ ಗಮಲಿನ ಸುಗಂಧ ಪುಷ್ಪದ ಶಯ್ಯೆಯಲ್ಲಿ ಮತ್ತಾವ ಮತ್ತು ತಲೆಗೇರದಂತೆ
ಕರಗಿಸಿಕೊಂಡು ಬಿಡು ನಿನ್ನ ಕರುಣಕಡಲಲ್ಲಿ
ಮೋಹದ ದಾಹಕೆ ಹಪಹಪಿಸುವ
ಈ ಮಾಂಸ ಮುದ್ದೆಯ ಘಟವನ್ನು

ಮನದ ಗಡಿಯ ಸುತ್ತ ನಿನ್ನ ಭಾವತರಂಗದ ಬಲೆಯ ಎಣೆದು ಬಿಡು ಎನ್ನ ಚಿತ್ತ ಮತ್ತಾರ ಕಡೆಯೂ ಜಾರದಂತೆ
ನೀನೆ ಒಂದು ಕಾರಗೃಹವಾಗಿ ಬಿಡು
ನಾನೇ ಬಂಧಿಯಾಗುವೆ ಜೀವನ್ಮರಣದ ಕೊನೆಯವರೆಗೂ...
    

By: ದಾಸ್ ರಂಗೇನಹಳ್ಳಿ

Comments[0] Likes[5] Shares[0]

Submit Your Comment

Latest Comments

No comments are available!