Poem

ಮಹಾದೇವ

ಬಾನ ಚಂದಿರ ನಿನ್ನ ಶಿರದಾಗೆ,
ನೀಲಕಂಠ, ಹರಿವ ಗಂಗೆ ಹೊತ್ತೆ ಜಟೆಯಾಗೆ!

ಹಣೆಯ ಮ್ಯಾಲೆ ವಿಭೂತಿಯಾ ಗೆರೆ,
ಮುಕ್ಕಣ್ಣ ನಿಂಗೆ, ಮೈಯೆಲ್ಲಾ ಕಣ್ಣೇ ದೇವಗೆ!
ಕೊರಳ ಸುತ್ತಿರೋ ಗೋದಿ ಸರ್ಪ,
ಹೇ ಶಿವ ನಿನ್ನ, ಸ್ತುತಿಯು ಸಾಕೆ ಮುಕ್ತಿಗೆ!

ರುದ್ರಾಕ್ಷಿ ಮಾಲೆ ಸ್ವಚ್ಛ ಅಕ್ಷಿ,
ಕಾಣುವೆ ನಿನ್ನೇ, ಜಗದ ಎಲ್ಲಾ ಒಳಿತಾಗೆ!
ಡಮರುಗ ಬಡಿತ ಸ್ವರ್ಗ ಸಹಿತ,
ಆಡ್ಯಾವೆ ಮೂರು, ಲೋಕ ಓಂಕಾರ ಸದ್ದಿಗೆ!

ಬಿಲ್ವಪತ್ರೆ ಶುದ್ಧ ಭಕ್ತಿಯಾ ಪಾತ್ರೆ,
ಸಾಕಲ್ಲ ನಿಂಗೆ, ಒಲಿದು ಅಸ್ತು ಅನ್ನೋಕೆ!
ಒಂಚೂರು ಸಿಗಲಿ ನಿನ್ನ ಕರುಣೆ,
ಬೇರೇನು ಬೇಡ, ಬಾರಯ್ಯ ಮನದಿ ನೆಲೆಸೋಕೆ!

By: ಸಹನಾ ಕಾರಂತ್‌

Comments[0] Likes[31] Shares[2]

Submit Your Comment

Latest Comments

No comments are available!