Poem

ಮಲೆನಾಡು

ಕಾದ ನನ್ನೆದೆಯ ಭಾವಕಿರಣಗಳ
ತಂಪಾಗಿಸುವ ಮಡಿಲು ನೀನು
ನನ್ನ ಕಿರುನಗೆಯ ಸದ್ದಾಲಿಸೋ
ಸೊಬಗಿನ ಅತೀವ ಸುಂದರಿ ನೀನು
ಹಚ್ಚ ಹಸಿರ,ಸೂರ್ಯಕಿರಣಗಳ ಅಂಚಿನ
ಸೀರೆಯುಟ್ಟ ನನ್ನ ಗೆಳತಿ ನೀನು
ನಿನ್ನ ಮುದ್ದಾದ ಮೈ ಮಾಟಕೆ ಸೋತು
ಮೂಖನಾದ ಮಾತುಗಾರ ನಾನು
ನಿನ್ನ ನಾಚುವ ಕೆಂಬಣ್ಣದ ತುಟಿಯ
ನಗುವ ಸೆರೆ ಹಿಡಿಯುವ ಪ್ರೇಕ್ಷಕ ನಾನು
ನಿನ್ನ ನಿರ್ಮಲ ಶೋಭಿತ ಮನಸ್ಸಿನಾಳದಲಿ
ಸುಳಿಯುವ ನೆನಪಿನ ಮಂದ ಅಲೆ ನಾನು
ನನ್ನ ಕೆರಳಿಸಿ ಕವಿತೆ ಮೂಡಿಸಿದ ನಿನ್ನ
ಮೋಡಿಗೆ ಶರಣಾದ ಪ್ರೇಮಿ ನಾನು


ಇನ್ನೆಷ್ಟು ನಾ ನಿನ್ನ ಪ್ರೀತಿಸಲಿ
ಜೋಡದ ಪದಗಳ ಪೋಣಿಸಲಿ...?
ಹೇಳು ಬಾ...
ಓ ನನ್ನ ಮಲೆನಾಡೇ....
ನಾ ಮೌನಕೆ ಮುತ್ತಿಡುವ ಮೊದಲೆ
ಹೇಳು ಬಾ...

By: ಮಧುಕುಮಾರ್ ಎನ್.

Comments[2] Likes[4] Shares[0]

Submit Your Comment

Latest Comments

Nopishankara M L
Jul 09,2020

ತುಂಬಾ ಸೊಗಸಾಗಿದೆ

ಸುಷ್ಮಾ ಬಿ. ಎಸ್.
Jul 09,2020

ಮಲೆನಾಡ ತಾಯ ಸೊಬಗನ್ನು ಹೇಳಲಸಾಧ್ಯ... ನಿಮ್ಮ ಸುಂದರ ಪದಮಾಲೆಯಿಂದ ಅವಳನ್ನು ಇನ್ನಷ್ಟು ಚಂದವಾಗಿ ಅಲಂಕರಿಸಿದ್ದೀರಿ 💐