Poem

ಮನದ ಮಾತು

ಮನದ ಮಾತು ಮುಗಿಲಿಗೆ ಮುಟ್ಟಿದೊಡನೆ,
ಸಾಂತ್ವನ ಹೇಳಲು ಮಳೆಯ ಹನಿಗಳು
ಒಂದರ ಮೇಲೆ ಒಂದರಂತೆ ಬಿದ್ದಷ್ಟೂ,
ಅಂಗಳ ಖುಷಿಯಾಯಿತೇ ಹೊರತು
ಮನದಂಗಳವಲ್ಲ.

ನೆನೆದಷ್ಟೂ ನೆನಪಾಗುವ
ನೆನಪುಗಳನ್ನು ನೆನಪಿಸಿಕೊಳ್ಳದಿರುವಲ್ಲಿ
ಮನಸ್ಸು ಪಟ್ಟ ಪ್ರತಿ ಪ್ರಯತ್ನವೂ ಸೋತಿದೆ

ಪಾರ್ಕಿನ ಬೆಂಚುಗಲ್ಲುಗಳಲ್ಲಿ 
ಸಾವಿರ ನೆನಪುಗಳು ಅನಾಥವಾಗಿವೆ,
ಸಿನಿಮಾ ಥಿಯೇಟರ್'ನಲ್ಲಿ 
ಪರದೆಗಿಂತ ಹೆಚ್ಚು ಕಥೆಗಳು ನಾವು ಕುಳಿತ ಸೀಟಿನಲ್ಲಿವೆ.

ಎಲ್ಲವನ್ನೂ ತೊರೆದು,
ವಿಶಾಲವಾದ ಸಮುದ್ರವನ್ನು ಮೈ ಮರೆತು,
ನೆಮ್ಮದಿಯನ್ನು ಬಯಸಿದ ಮನಸ್ಸಿಗೆ 
ದೊರಕಿದ್ದು ಬೇರೆಯೇ.

ಮರಳಿನ ಮೇಲೆ ಜೊತೆಯಾಗಿ ಹೆಜ್ಜೆ ಇಟ್ಟು ಮರಳಿದವಳು,
ಮರಳಿ ಬರುವುದೆಂದು?

By: ವಿಕ್ಕಿ ಚಿಕ್ಕಮಗಳೂರು

Comments[0] Likes[0] Shares[0]

Submit Your Comment

Latest Comments

No comments are available!