Poem

ಮನೆಯಾಕೆ

ನಾಲ್ಕು ಗೋಡೆಗಳಿಗೆ
ಒಡತಿಯಾದಾಕೆ
ಮನೆಕೆಲಸಗಳಲ್ಲಿ ನನ್ನನೇ
ಕಳೆದುಕೊಂಡಾಕೆ

ಹೊರಗಡಿಯಿಟ್ಟರೆ, 
ಮೂದಲಿಕೆಗಳ ಬರೆ
ಕೆಲಸವಿಲ್ಲದವಳೆಂಬ ಬಿರುದು ಬೇರೆ
ಬೇಜಾರೇನಿಲ್ಲ, ಬದುಕ ಸವೆಸಿದ್ದೇನೆ
ನನ್ನ ನಂಬಿದವರಿಗಾಗಿ

ಆದರೂ ಹೀಗೆ ಒಮ್ಮೊಮ್ಮೆ
ಮನದ ಮೂಲೆಯಲೆಲ್ಲೋ
ಎಚ್ಚೆತ್ತುಕೊಳ್ಳುತ್ತೇನೆ
ಕೊರಗುತ್ತೇನೆ
ನನಗಿದೆಲ್ಲ ಬೇಕಿತ್ತೆ? 
ಪ್ರಶ್ನಿಸಿಕೊಳ್ಳುತ್ತೇನೆ
ಒತ್ತಡ ಸಹಿಸದ ಉಸಿರು
ದೀರ್ಘ ಹೊರಡುತ್ತದೆ

ಏಣಿ ಏರಿ, ಬದುಕ ತುದಿ
ತಲುಪಿದವರೆಲ್ಲ, ತಕರಾರೇ ಇಲ್ಲದೆ
ದೂರ ಬಹುದೂರ ಹೊರಟಾಗಿದೆ

ಈಗ ಅಂದುಕೊಳ್ಳುತ್ತೇನೆ
 "ನನಗಾಗಿ ಬದುಕಬೇಕಿತ್ತು
ನನಗಾಗಿ ಬದುಕಬೇಕಿತ್ತು"

By: ಲತಾ ರಮೇಶ ವಾಲಿ

Comments[3] Likes[10] Shares[9]

Submit Your Comment

Latest Comments

tyunjayaMrity
Jul 09,2020

True lines 👌👌

Sheela. Goudar
Jul 08,2020

True

ಪ್ರತಿಭಾ ಪಾಟೀಲ
Jul 06,2020

ಮನ ಮುಟ್ಟುವ ಸಾಲುಗಳು .