Poem

ಮಣ್ಣಿನ ಗೋಡೆ

ರಟ್ಟೆ ಬಲದಲಿ
ಹೊಟ್ಟೆಯ ತುಂಬಿಸಿದ
ಹೊತ್ತು ಮುಳುಗಿ ಸೂರ್ಯ ಹೋದಾಗ
ತಾನು ಬಂದು ಸೀಮೆ ಎಣ್ಣೆ ತಂದು
ದೀಪ ಹಚ್ಚಿ ಗುಡಿಸಲು ಬೆಳಗಿಸಿದ,ಅಪ್ಪ.

ರೊಟ್ಟಿ ಸುಟ್ಟು
ಎರಡು ಮಕ್ಕಳ ಹೆತ್ತು
ಕರು ಆಕಳು ಎಮ್ಮೆ ಎತ್ತು
ಗಳಿಗಾಗಿ ಹುಲ್ಲು ಹೊತ್ತು
ಹಸಿರು ಗಾಜಿನ ಬಳೆಯ ತೊಟ್ಟು
ಸಗಣಿ ವಾಸನೆಯ ಕೈಗಳ ಹೊತ್ತು
ಮನೆ ಬಳಿದು ಬೆಳಗಿದಳು,
ಅವ್ವ.

ತಾಯಿ ಕರುಣೆಯ ಗುಡಿ
ಗುಡಿಯೊಳಗೆ ಕತ್ತಲು
ಆ ಕತ್ತಲ ಕರಗಿಸಲು
ಸೀಮೆ ಎಣ್ಣೆ ದೀಪದಲಿ
ಓದುತ್ತಿರುವವರು ಮಕ್ಕಳು.

ಗಳೇವು ಕಟ್ಟಿ
ಜೋಳ ಶುಂಠಿ ಹತ್ತಿ
ಬೆಳೆದರು ಅದಕೆ ರೋಗ ಹತ್ತಿ
ಪರಾವಲಂಬಿಗಳ ಬದುಕು ಆಯ ತಪ್ಪಿ
ಬಿದ್ದಾಗ ಎತ್ತದ ಭಗವಂತ
ಹಿಯಾಳಿಸೋ ಸ್ಥಿತಿವಂತ
ರ ಮಾತಿಗೆ ಬೆಂದಿರುವರು
ಅವ್ವ-ಅಪ್ಪ

ಆದರೂ

ಕಣ್ಣುಗಳು ಸುರಿಸುವ ಹನಿಗಳ ನೀರು ಕಟ್ಟಿದರೆ
ಮನಸ್ಸೆಂಬ ಗೋಡೆ ಬಿರಿಯುವುದು
ಮಣ್ಣಿನ ಗೋಡೆ ಹಾಗೆ
 ಆ ಬಿರುಕಲಿ ಬೆಳೆದ ಸಸಿಯ ಹಾಗೆ ತನ್ನ ಮಕ್ಕಳು
ಬೆಳೆದು ಸಾಕುವರು ತನ್ನನ್ನು ಮಹಾರಾಣಿ ಹಾಗೆ ಎನ್ನುವಳು
ಅವ್ವ

By: ಮಧುಕುಮಾರ್ ಎನ್.

Comments[3] Likes[15] Shares[2]

Submit Your Comment

Latest Comments

NAIK GEETA UGEETA
Jul 09,2020

ನಿಜವಾದ ಬದುಕಿನ ಸುಂದರವಾದ ಬರಹ. ಕೊನೆಯ ಸಾಲಿನಲ್ಲಿ ಪ್ರತಿಯೊಬ್ಬ ತಾಯಿ ಕಾಣುವ ಕನಸು ಮನ ಮುಟ್ಟುವಂತಿದೆ... 👌👌

Srikanth N hegde
Jul 09,2020

Spr

ಸುಷ್ಮಾ ಬಿ. ಎಸ್.
Jul 08,2020

ಸಾಮಾನ್ಯ ಬದುಕಿನ ನೈಜ ಚಿತ್ರಣ ಮನಮುಟ್ಟುವ ರೀತಿಯಲ್ಲಿ ಮೂಡಿಬಂದಿದೆ 👌