Poem

ಮರಳಿ ಬಾಲ್ಯಕೆ

ಬಾಲ್ಯವು ಸಕ್ಕರೆ 
ತೋರಿತು ಅಕ್ಕರೆ
ಅಳಿಸಿತು ನಕ್ಕರೆ
ನಗಿಸಿತು ಅತ್ತರೆ

ಚಿಕ್ಕ-ಪುಟ್ಟ ಕನಸು 
ಮುಗ್ಧ ಮುಗ್ಧ ಮನಸು 
ಒಮ್ಮೊಮ್ಮೆ ಇರುಸುಮುರುಸು
ತುಂಟಾಟವೇ ಸೊಗಸು

ಬುಗುರಿಯ ಚಾಟಿ
ಗೋಲಿಯ ದಾಟಿ 
ತಂಬೂರಿಯ ಮೀಟಿ
ಆದೆವು ಮರಕೋತಿ
 
ಪೋಮ್ ಪೋಮ್ ಐಸ್ಕ್ರೀಂ ಕೊರೆತ
ಹುಳಿ ಹುಳಿ ಹುಣಸೆಯ ಜಗಿತ
ಮರೆವೆವು ಖಾರದ ಬೋಟಿಯ ಖಂಡಿತ 
ಸವಿದೆವು ಗೆಳೆಯರ ಸಹಿತ 

ಶಾಲೆಯ ದಿನಗಳ ನೆನಪು 
ನಂದಿಸಲಾಗದ ಹೊಳಪು 
ಗೆಳೆಯರ ಬಂಧದ ಹುರುಪು
ಅಳಿಸಲಾಗದ ಸವಿನೆನಪು 

ಅಂದು ಹೃನ್ಮನವೆಲ್ಲಾ ಹಾಲೋಹಾಲು 
ಇಂದು ತುಂಬಿದೆ ಹಾಲಾಹಲವು!
ಒಮ್ಮೆ ಮರಳಲಿ ಮನಕೆ ಬಾಲ್ಯವು 
ಮುಗ್ಧತೆಯ ಸಿಹಿ ಹೂರಣವು...

By: ಪ್ರಿಯಾಂಕ ಚಕ್ರಧರ

Comments[1] Likes[8] Shares[2]

Submit Your Comment

Latest Comments

Karan
Jul 06,2020

👌👌