Poem

ಮರುಸೃಷ್ಟಿ.

ಮರು ಸೃಷ್ಟಿ. 
ಅಂದು ಕವಿತೆಯಾದವಳು ಇಂದು
ಕಥೆಯಾಗುವ ಆಸೆ ಹೊತ್ತಿರುವಳು.
ನವ ಜೀವನಕ್ಕೆ ನಾಂದಿಯಾದವಳು
ನನ್ನೆದೆಯ ರಾಜ್ಯವನ್ನು ಆಳುವವಳು
                     ಮನವನ್ನು ಕಾಡಿಸಿ ತೀಡಿಸುವಳು
                     ಲೇಖಿಸಲಾರೆ ಎಂದರು ಬಿಡಲಾರಳು
                     ಯಾವ ಜನ್ಮದ ಅನುಬಂಧದವಳೊ
                     ಮನಕ್ಕೆ ಬೆಸುಗೆಯಾಗಿ ಬೆರೆತಿರುವಳು
ನೊಂದಾಗಲೆಲ್ಲಾ ಸಾಂತ್ವನ ಹೇಳಿದಳು
ಮನವನ್ನು ಜಿಗಿಯುವಂತೆ ಮಾಡಿಹಳು
ಸೋರಗಿದ ಸ್ವಪ್ನಕ್ಕೆ ನೀರೆರೆದು ನಕ್ಕಳು
ಮನದ ಅನಂತ ಚಿಲುಮೆಯಾದವಳು
                        ಪದಗಳ ಜೊತೆ ಸೆಣಸಾಟ ಇಟ್ಟಳು
                        ಅದರಲ್ಲಿ ಆಹ್ಲಾದಕರ ಕೊಟ್ಟವಳು
                        ಒಲವಿನ ಸವಿಯ ಉಣ್ಣಿಸಿದವಳು
                        ನನ್ನಲ್ಲಿ ಅಚಲಶಕ್ತಿಯಾಗಿ ನೆಲೆಸಿದಳು

By: ಯೋಗಾನಂದ ಎನ್ ಬಿ

Comments[0] Likes[2] Shares[1]

Submit Your Comment

Latest Comments

No comments are available!