Poem

ಮಾತು ಮೌನವಾದಾಗ...!!

ಆ ಕ್ಷಣ 
ಹಗಲಿಗೇ ಇರುಳಿನ ಸ್ಪರ್ಶ 
ಕತ್ತಲು-ಕಗ್ಗತ್ತಲಿಗೂ ಸಂಘರ್ಷ 
ಉದಯಿಸಿದಾಕ್ಷಣವೇ 
ಸೂರ್ಯನೂ ಅಸ್ಥಂಗತ!
ಗಾಳಿಯೂ ತಟಸ್ಥ!!
ಭೋರ್ಗರೆವ ಕಂಬನಿ 
ನಿಶ್ಶಬ್ಧದ ಅನುರಣಿ 

ಸ್ಮೃತಿ ಗೂ ಅಗೋಚರ 
ಮೃತಿಯ ಸಂಚಾರ 
ಹಾ..! ಮಾತಿಗೆ ಮೃತಿಯ ಭೆಟ್ಟಿ 
ಮೌನಕೆ ಆಘಾತದ ಚಾವಟಿ 
ಮಾತಿನ ಸಾವು
ಮೌನದ ನೋವು!
ಮಾತೇನೋ ವಿಲೀನ 
ಮಡುಗಟ್ಟಿತ್ತು ಮೌನ 

ಅಂತೂ
ಮೌನದ ಪಟ್ಟಾಭಿಷೇಕವೀಗ 
ಹಿಗ್ಗುವ ಬದಲು ಕುಗ್ಗಿತು ಮೌನವಾಗ 
ಹೊರಲಾರದ ಭಾರವು 
ಆರದ ಬೇಗೆಯ ಕಾವು!
ಆರಂಭವಾಯಿತು ಮೌನದಾಳ್ವಿಕೆ 
ಆದರೂ ಉರಿಯುತಲಿತ್ತು 
ದುಃಖದ ಅಗ್ಗಿಷ್ಟಿಕೆ 

ಕೋಲ್ಮಿಂಚೊಂದು ಸುಳಿಯಿತು 
ಮಿಂಚಿನ ಹಾದಿಯಲೆ ಮೌನ ಇಣುಕಿತು 
ಉರಿಯುತಲಿತ್ತಲ್ಲೊಂದು ದೀಪ 
ಒಡಲಾಳದ ದೀಪ 
ಪ್ರತಿಧ್ವನಿಸಿತಲ್ಲೆಲ್ಲೋ ಮಾತು 
ಮನದಾಳದ ಮಾತು 
ಹಿಂದಿರುಗಿದ ಮೌನ-ಮಾತಿಗೆ
ಕಾಯುತಲಿತ್ತು ಭರವಸೆಯಿಂದ 
ರಾಮನಿಗೆ ಕಾದ ಭರತನ ಹಾಗೆ...

By: ಪ್ರಿಯಾಂಕ ಚಕ್ರಧರ

Comments[3] Likes[8] Shares[2]

Submit Your Comment

Latest Comments

Sjree
Jul 06,2020

Sometimes the best answer is silence.

Lavanya
Jul 06,2020

Nice.goodluck fr ur future babzz

Karan
Jul 06,2020

👌👌