Poem

ಮೋಡ ಮತ್ತು ಮಳೆ

ಬಿಸಿಲಿನ ತಾಪಕೆ ಮರೆಯಾಗಿಹ ಮೋಡವೇ 
ಸ್ವಚ್ಛಂದ ಆಗಸವ ಆವರಿಸುತ ಬನ್ನಿ 
ಹನಿಗಾಗಿ ಕಾದಿಹ ಭುವಿಯ ತಂಪೆರೆಸಲು ಬನ್ನಿ
ಬಿರುಸಾಗಿ ಬನ್ನಿ ನವಚೈತನ್ಯವ ಹರಸುತ ತನ್ನಿ!!

ಗಾಳಿಯ ಸೂಸುತ ತಂಪನು ಚೆಲ್ಲುತ 
ಹಸಿರ ಕಾಂತಿಗೆ ಹೊಳಪನು ತನ್ನಿ
ಕೃಷಿಕನ ಬಾಳಲ್ಲಿ ಸಂತೃಪ್ತಿ ತರಲು 
ಮೋಡದಿ ಹನಿಯಾಗಿ ಇಳೆಗೆ ಬನ್ನಿ!!

ಮೇವಿಗಾಗಿ ಕಾದಿಹ ಮೂಕಪ್ರಾಣಿಗಳಿಗೆ 
ಅವುಗಳ ಒಡಲನು ತೃಪ್ತಿಪಡಿಸಲು  ಬನ್ನಿ
ಆಕಾಶದಿ ನಿನ್ನನೇ ದಿಟ್ಟಿಸಿ ನೋಡುತ ಕುಳಿತ 
ರೈತನ ಮೊಗದಿ ಸಂತಸ ತರಲು ಬನ್ನಿ!!

ಪ್ರಕೃತಿ ಸೌಂದರ್ಯ ಸೊಬಗ ಹೆಚ್ಚಿಸಲು 
ಬತ್ತಿದ ಕೆರೆ ಕಟ್ಟೆಗಳು ತುಂಬಲು ಬನ್ನಿ
ಖಗ ಮೃಗಗಳಿಗೆ ದಾಹ ತೀರಿಸಲು 
ಬನ್ನಿ ಬನ್ನಿ ಮಳೆಹನಿಹನಿಯಾಗಿ ಬನ್ನಿ!!

By: ಮೌನಿ ಮುನೇಶ್

Comments[4] Likes[10] Shares[0]

Submit Your Comment

Latest Comments

ವೀರೇಶ್ ಮಲ್ಲಿಕಾರ್ಜುನ್
Jul 08,2020

ಜೀವ ಮತ್ತು ಪ್ರಕೃತಿಯ ಸಂಬಂಧ ಬೆಸೆಯುವ ಈ ಕವನ ಸೊಗಸಾಗಿದೆ

Rರಾಜೇಶ್
Jul 06,2020

ಸೂಪರ್ ಇನ್ನು ಹೆಚ್ಚು ಹೆಚ್ಚು ಕವಿತೆ ಗಳನ್ನು ಬರೆದು ದೊಡ್ಡ ವ್ಯಕ್ತಿ ಆಗು... ಸ್ನೇಹಿತ ಶುಭವಾಗಲಿ

Ravindra
Jul 06,2020

Kannada padagala balake thumba chennagide e kaavyadalli.