Poem

ಮೊದಲ ಮಳೆ

ತಂಗಾಳಿ ಮುದ್ದಾಡಿ ಬರಸೆಳೆಯ ಬೇಕಿದೆ,
ಸೂಚನೆಯೇನೂ ಕೊಡದೆ ಮಳೆ ಈಗ ಸುರಿದರೆ!
ಹನಿ ಹನಿಗೆ ಮುತ್ತಿಟ್ಟು ನಸುನಗ ಬೇಕಿದೆ,
ಭೂಮಿಯು ತಂಪಾಗಿ ಹಸಿರಾಗಿ ನಿಂತರೆ!

ಬಣ್ಣ ಬಣ್ಣದ ಸ್ವಪ್ನದಿ ಸಂಚರಿಸಬೇಕಿದೆ,
ಮಳೆಬಿಲ್ಲು ನನಗಾಗಿ ದಾರಿಯ ತೆರೆದರೆ!
ನೀರಲ್ಲಿ ನಾ ನೆನೆದು ಕರಗೋಗಬೇಕಿದೆ,
ಕನಸೆಲ್ಲಾ ಕಣ್ತೆರೆದು ನನಸಾಗಿ ನಿಂತರೆ!

ಸಿಡಿಲನ್ನು ತಡೆದು ಮಾತಾಡಬೇಕಿದೆ,
ನನಗಾಗಿ ಸಂದೇಶ ಮೋಡವು ಕಳಿಸಿರೆ!
ಜಗವನ್ನೇ ಮರೆತು ಕಳೆದೋಗಬೇಕಿದೆ,
ನನ್ನೊಳಗಿನ ಕವಿ ಎಚ್ಚೆತ್ತು ಕುಳಿತರೆ!
                                           

By: ಸಹನಾ ಕಾರಂತ್‌

Comments[0] Likes[30] Shares[0]

Submit Your Comment

Latest Comments

No comments are available!