Poem

ಮೋಹನ ರಾಗ

ಹಾಡು ಹಕ್ಕಿಯಾಗಿ ಮನವು ಹಾಡುತಿಹುದು ತನನನಾ
ಮನದ ವೀಣೆ ನುಡಿಸಿ ಶ್ಯಾಮ ಬರುವ ದಿನ ದಿನ
ಕಾಡು ಬಿದಿರು ಕೊಳಲಾಗಿ ಮಾಧವನ ಬೆರಳಂಚಲಿ
ಗಾನಲೋಕದೆಡೆಗೆ ಸಪ್ತಸ್ವರದ ಸಮ್ಮೋಹನ

ಅದರಗಳು ಆದರದಿ ಮುರಳಿಯ ಬಿಗಿದಪ್ಪಿರಲು
ಸನಿ ಸನಿಹ ಸರಿದ ಬೆರಳಂಚಿನ ಸ್ಪರ್ಶಕೆ
ಹೊರಟಿತ್ಹಲವು ರಾಗವು ರಾಗ ಮೇಳ ವಾಗಿ
ಎದೆಯ ಭಾವ ಜೊತೆಯಾಗಿ ಮೋಹನಾದಕೆ

ಭಾಮೆಯೊಡಗೂಡಿ ಬಾ ಮಾಧವ ಮಧುಸೂದನ
ಕ್ಷೀರಸಾಗರದಿ ಜಳಕಗೈದು ಬೃಂದಾವನಕೆ
ಮರಳಿ ಮುರಳಿಯ ನುಡಿಸಿ ಮುದ ನೀಡಿ
ನಿನ್ನಾಗಮನಕೆ ಕಾದಿಹ ಭಕ್ತವೃಂದಕೆ

By: ಸುಮಲತಾ ನಾಯ್ಕ

Comments[6] Likes[50] Shares[4]

Submit Your Comment

Latest Comments

Nagendra Naik
Jul 14,2020

Super sister

Roopanath naik
Jul 08,2020

Tumba chennagide...

Sujata
Jul 08,2020

Wonderful poem🥰🥰😌

Naik K Shankar
Jul 08,2020

Super

Santosh Naik
Jul 08,2020

super...👌🎉

Devidas M. Moger
Jul 06,2020

Very nice poem