Poem

ಮುಖವಾಡದ ಬದುಕು

ಮಳಿಗೆಗಳು ಹಲವುಂಟು ಲೋಕದ ಜಾತ್ರೆಯಲ್ಲಿ
ನೂರೆಂಟು ಬಗೆಗಳು ಈ ಮಳಿಗೆಗಳಲ್ಲಿ
ಮಳಿಗೆಯೊಂದರ ಮುಂದೆ ನೆರೆದಿದ್ದರು ಸಾವಿರಾರು ಜನರು
ಮಕ್ಕಳಿಂದ ಮುದುಕರವರೆಗೂ ಸಾಲುಗಟ್ಟಿ ನಿಂತಿಹರು

ಬಗೆಬಗೆಯ ಬಣ್ಣದ ಸಾವಿರಾರು ಮುಖವಾಡಗಳು
ಕೊಂಡೊಯ್ಯಲು ತಂದಿಹರು ನೂರೆಂಟು ಚೀಲಗಳು
ತಾನು ತನ್ನತನವನ್ನು ಮರೆಸುವಂತಹದು ಮುಖವಾಡದಾಟ
ಹೆಚ್ಚಿದೆ ಮಾನವೀಯತೆಯ ಮುಖವಾಡದ ಹುಡುಕಾಟ

ಪಾಪವೊಂದು ಕೊಳ್ಳುತ್ತಿತ್ತು ಪುಣ್ಯದ ಮುಖವಾಡ
ಸುಳ್ಳೊಂದು ಕೊಳ್ಳುತ್ತಿತ್ತು ಸತ್ಯದ ಮುಖವಾಡ
ಅಪ್ರತಿಷ್ಠೆಯೊಂದು ಕೊಳ್ಳುತ್ತಿತ್ತು ಪ್ರತಿಷ್ಠೆಯ ಮುಖವಾಡ
ಮುಪ್ಪೊಂದು ಕೊಳ್ಳುತ್ತಿತ್ತು ಯೌವ್ವನದ ಮುಖವಾಡ

ನರಿಯೊಂದು ಕೊಳ್ಳುತ್ತಿತ್ತು ನಾಯಿಯ ಮುಖವಾಡ
ಕತ್ತೆಯೊಂದು ಕೊಳ್ಳುತ್ತಿತ್ತು ಕುದುರೆಯ ಮುಖವಾಡ
ಗೂಬೆಯೊಂದು ಕೊಳ್ಳುತ್ತಿತ್ತು ನವಿಲಿನ ಮುಖವಾಡ
ಕಾಗೆಯೊಂದು ಕೊಳ್ಳುತ್ತಿತ್ತು ಕೋಗಿಲೆಯ ಮುಖವಾಡ

ಎಷ್ಟು ದಿನಗಳವರೆಗೆ ಹೊರುವೆ ಈ ಮುಖವಾಡದ ಹೊರೆ
ಮುಖವಾಡದ ಬೇಡಿಗೆ ನೀನಾಗಿಹೆ ಸೆರೆ
ಮುಖವಾಡ ಧರಿಸದ ಮುಖವೊಂದಿಲ್ಲವೇ ದೊರೆಯೊಳು?
ಮರೆಮಾಚುವುದು ನಿಜಮುಖ ಮುಖವಾಡದೊಳು

By: ಶಂಕರ ಇಟಗಿ

Comments[43] Likes[238] Shares[68]

Submit Your Comment

Latest Comments

ತೋಷ ಚಲವಾದಿ.
Jul 14,2020

ಇದೊಂದು ಅದ್ಭುತ ಕವನ. "ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು " ನಾನ್ನುಡಿಯಂತೆ ಮನುಷ್ಯನ ಹುಟ್ಟು ಸಾವಿನ ನಡುವೆ ನಡೆಯುವ ಜೀವನದ ಜೀವನದ ಸಾರಾಂಶವನ್ನು ವಿವರಿಸುವ ಆಶಯ ಕವಿ ಶಂಕರ ಇಟಗಿಯವರದ್ದಾಗಿದೆ. ಮನುಷ್ಯನ ಮಾನವೀಯ ಮೌಲ್ಯ ಗುಣಗಳು ನೈಜ ಜೀವನ ಹಾಗೂ ಸಮಾಜದ ಹತ್ತು ಹಲವಾರು ಮುಖವಾಡಗಳನ್ನು ಈ ಕವನದಲ್ಲಿ ತೆರರದಿಟ್ಟಿದ್ದಾರೆ. ಯುವ ಸಾಹಿತಿ ಕವಿ ಶಂಕರ್ ಇಟಗಿ ಅವರಿಗೆ ಅಭಿನಂದನೆಗಳು.

siddumurthy
Jul 14,2020

ತುಂಬಾ ಚೆನ್ನಾಗಿದೆ..👌

Pramod S
Jul 08,2020

It's too good lines in present situation. Keep it up and write well.

Manikanta Chagi
Jul 08,2020

Ana mast ana

Goutham devreddy
Jul 08,2020

Awesome dude

anand
Jul 06,2020

Wow!!! ಅದೆಂಥ ಶಬ್ದ ಬಂಡಾರ.ಅತ್ಯಂತ ಶ್ರೀಮಂತಿಕೆಯ ಪದಜೋಡಣೆ ನಿಜವಾಗ್ಲೂ ತುಂಬಾ ಖುಷಿ ಕೊಡುವ ಸಾಲುಗಳು ಶುಭವಾಗಲಿ ಮಿತ್ರ,,,

Amit
Jul 06,2020

Well written.

ಶ್ರೀಕಾಂತ ವೆಂ ಬೇಗೂರು
Jul 06,2020

ಚಿ||ಶಂಕರ ಇಟಗಿ, ಬರೆದಿರುವ ಉತ್ತಮ ಹಾಗೂ ಬಹಳ ಪ್ರಸ್ತುತ ಆಗಿರುವ ಕೆಲವು ಕೃತಿ ಗಳಲೊಂದಾದ "ಮುಖವಾಡದ ಬದುಕು" ಜನ ಮೆಚ್ಚಿದ ಕವಿತೆ ಸಧೆ೯ಯಲ್ಲಿ ಕಂಡು ಅತ್ಯಂತ ಸಂತಸ ವಾಗಿದೆ. ಇಟಗಿ ಯವರಿಗೆ ಅಭಿನಂದನೆಗಳು.

raSwamyKuma
Jul 06,2020

It's very realistic nice one

Pooja K M
Jul 06,2020

Awesome

Abhishek Khot
Jul 06,2020

Awesome 👌👌👍👍

Santhosh
Jul 06,2020

A very beautiful and meaningful.. superb

Shweta Hubballi
Jul 06,2020

ನೈಜ ಜಗತ್ತಿನ ಸುಂದರ ಕವಿತೆ

Prahlad P Bhat
Jul 06,2020

😊😊

Jayashankar J
Jul 06,2020

Nice lines keep working on it you have a great future ahead.

Jul 06,2020

ಪಾಪ ಪುಣ್ಯ ಸತ್ಯದ ಮುಖವಾಡಗಳ ಬಗ್ಗೆ ತಿಳಿಸಿರುವ ಈ ಕವಿತೆ ನಿಜಕ್ಕೂ ಅದ್ಬುತ ಸಮಾಜದ ಆಂಕು ಡೊಂಕು ಗಳ ಬಗ್ಗೆ ಜಂಟಿ ಮನಸ್ಥಿತಿಯ ಬಗ್ಗೆ ಸರಿಯಾಗಿಯೇ ತಮ್ಮ ಕವಿತೆ ಯಲ್ಲಿ ತಿಳಿಸಿದ್ದಾರೆ

Hari prasad
Jul 06,2020

True lines in case of millennials, however can we change the society..? Will be just a belief but atleast raising the voice against will just be a releif. Good work from Shankar Itagai, wishing him best of luck..

Prajwal Karunakara
Jul 06,2020

Nice one

Veeresh guli
Jul 06,2020

Great lines

Varsha R
Jul 06,2020

Marvelous

S reeNagash
Jul 06,2020

Very true and correct Beautiful lines

Chethana M H
Jul 06,2020

One of the best poem that replicates the present scenario of the human nature..!

SATISH B
Jul 06,2020

👌👌👌

Sumanth Sathish
Jul 06,2020

E 2020 rali e padya keli thumba santhosha vayithu!! Shankar ravara shabdakosha hu thumba chanagide

Varun
Jul 06,2020

Beautiful

Praveen Kumar Hiremath
Jul 06,2020

ಅದ್ಭುತ ಸಾಲುಗಳು ಗೆಳಯ

SUSHMA
Jul 06,2020

_

Akshata math
Jul 06,2020

Nice

Shri shri shri
Jul 06,2020

Nice one bro🥳🥳🥳🥳🥳🥳🥳🥳🥳🥳🥳🥳🥳🥳🥳🥳💦

sandeep s
Jul 06,2020

ತುಂಬ ಚೆನ್ನಾಗಿದೆ

Anand .R. Hiregoudar
Jul 06,2020

Good poem about life

Manoj
Jul 06,2020

Present life going like this only,good thoughts Brother 👏

Alshi
Jul 06,2020

True words

VIJAY KUMAR T
Jul 06,2020

ವಾಸ್ತವವನ್ನು ಹೇಳುವ ಸುಂದರ ಕವಿತೆಯಾಗಿದೆ.

P MUJWAL
Jul 06,2020

Fab 😁, keep up the good work.

Aishwarya Chandrashekar
Jul 06,2020

👏👏👏👌

Appaji
Jul 06,2020

Very well written