Poem

ಮುಖವಾಡದ ಮುಖಗಳು

ಸಮಾಜದಲ್ಲಿ ಎಲ್ಲಿವೆ
ನಗ್ನ ಮುಖಗಳು
ಎತ್ತ ನೋಡಿದರೂ
ಮುಖವಾಡದ ಮುಖಗಳು

ನಗ್ನ ಮುಖಗಳು
ದಿಕ್ಕಾ ಪಾಲಾಗಿವೆ
ಕಾಣದೆ ನೆಲೆ
ಮುಖವಾಡಕ್ಕೆ ಸಿಗುತ್ತಿದೆ
ಎಲ್ಲೆಡೆ ನೆಲೆ

ಅಬ್ಬಾ! ಅದೆಂತಹ
ಮುಖವಾಡಗಳು
ನಿಜ ಮುಖವ ನಾಚಿಸುವ
ಮುಖವಾಡಗಳು

ಇನ್ನು ಕೆಲವು
ಗಾಂಧಿ ಮುಖದ
ಗೋಡ್ಸೆಗಳು
ಅವರು ಹಾಗೆ
ಇವರು ಹೀಗೆ
ಎಂದು ಹೇಳೀ
ತೇಜೋವಧೆ
ಮಾಡಿವ ಮುಖವಾಡಗಳು
ಸ್ವಾರ್ಥದ ಬೆನ್ನು ಹತ್ತಿದ
ಮುಖವಾಡಗಳು

ಮುಖವಾಡಗಳ ಮಧ್ಯೆ
ಪರಸ್ಪರ ಕೆಸೆರೆರೆಚಾಟ
ರಾಜಕೀಯ ಮೇಲಾಟ
ಆಸ್ತಿ, ಅಧಿಕಾರ, ಪ್ರಶಸ್ತಿ
ಸನ್ಮಾನ, ಬಹುಮಾನಗಳಿಗಾಗಿ
ನಿರಂತರ ಪರದಾಟ

ಸಂಭಾಷಣೆಯಲ್ಲಿ
ಅಮೃತ ಸುರಿಸುವ
ಮುಖವಾಡಗಳು
ಎಥಾ ಪ್ರಕಾರ
ಬೆನ್ನಿಗೆ ಚೂರಿ
ಹೇ ಮುಖವಾಡವೇ
ನೀನೆಷ್ಟು ಕ್ರೂರಿ

ಮುಖವಾಡದ ಹಿಂದೆ
ಕ್ರೂರ ಮೃಗಗಳು
ಮತ್ತೊಬ್ಬರ ಮುಗಿಸುವ
ಒಳ ಮಸಲತ್ತುಗಳು

ಮುಖವಾಡ ಕಳಚಿ ಬಿದ್ದಾಗ
ಭ್ರಷ್ಟರು, ಅತ್ಯಾಚಾರಿಗಳು,
ಕಳ್ಳರು,ಸುಲಿಗೆ ಕೋರರು,
ಹಂತಕರು,ಮೋಸಗಾರರು,

ಮನುಷ್ಯ 
ಮನುಷ್ಯನಾದಾಗ
ತಾನೇ ಕಳಚಿ 
ಬೀಳುವವು
ಮುಖವಾಡಗಳು...
 

By: ಈರಣ್ಣ ಬೆಂಗಾಲಿ

Comments[0] Likes[6] Shares[1]

Submit Your Comment

Latest Comments

No comments are available!