Poem

ನಾವು ಮತ್ತು ಸಾವು

ಇದ್ದವರಿಗಿಂತ ಹೋದವರ ಸದ್ದೇ ಹೆಚ್ಚಾಯ್ತು..
ಇದು ನ್ಯಾಯವೇ?
ಪರಪಂಚ ತುಂಬಿದೆಲ್ಲ ಅದ್ಭುತಕಿಂತ ಮನಸು ಕೆಡಿಸುವುದು ಅರ್ಬುದವೇ..!!

ಸಂತಸಕ್ಕಿಂತ ಅಂತಸ್ತು ದೊಡ್ಡಾಗಿ, 
ಅಭಿಮಾನ, ಅನುಮಾನ ಅವಮಾನ ಕೊನೆಗೆ
ಅವಸಾನ..!!
ಸ್ಮಶಾನ ಮೌನ..!!
ಸ್ಮಶಾನ ವೈರಾಗ್ಯ ಮತ್ತೆ ಮತ್ತೆ..
ಎರಡು ದಿನ ಅಷ್ಟೇ ಶೇರೂ ಹ್ಯಾಮನಗೋವರೂ..
ಮತ್ತೆ ಶುರು ಮಾಡುವರು ಅದೇ ಕಥೆ ಗೋಳು  ತಕರಾರು

ಅಷ್ಟರೊಳಗೆ ಮೈ ಮೇಲೆ ಕೂತ ಸೊಳ್ಳೆಯನಪ್ಪಳಿಸಿ ಬಡಿದಾಯ್ತು..
ಅದು ಎಷ್ಟು ಚಂದ ಹಾಡುತಿತ್ತು, ಹಾರಾಡುತಿತ್ತು.

ನಮ್ಮವರ ತಮ್ಮವರು 
ಎಲ್ಲ ದೂರಾದರು, 
ಹಣದ ಅಮಲಿನಲಿ
ಸ್ವಂತಿಕೆಯ ಕೋಟೆ ಕೊತ್ತಲಿನಲಿ 
ಕತ್ತಲಿನಲಿ ..

By: ಮಹೇಂದ್ರ ಹೆಗಡೆ ಸಂಕಿಮನೆ

Comments[2] Likes[27] Shares[2]

Submit Your Comment

Latest Comments

MANJUNATH
Jul 16,2020

ವಾಸ್ತವ

Sandhya bhat
Jul 06,2020

Nyc one..