Poem

ನಂಬಿಕೆಯ ಬೆಳಕು

ನಂಬಿಕೆಯ ಬೆಳಕು

ತವಕಿಸಲು ಭುವಿಯು ಬೆಳಕಿನ ಹಂಬಲದಿ
ಇರುಳು ಕಳೆದು ಎಂದೂ ಬೆಳಕಾಗದೇ...?
ಜಗದ ಗ್ರಹಣ ಕಳೆವುದೇ ಎಂದು ಕಾದಿಹೆವು
ನಂಬಿಕೆಯೊಂದೇ ನಮ್ಮನ್ನು ಕಾಪಾಡದೇ...?

ಕಾಣದ ಶಕ್ತಿ ಪ್ರಪಂಚವನ್ನೇ ನಡುಗಿಸಲು
ನಂಬಿಕೆ ಎಂಬ ಊರುಗೋಲು ಜಗತ್ತನ್ನೇ ನಡೆಸಿಹಲು |
ಸಮಾಜದ ಸೇವಕರು ದಿಟ್ಟತನದಿಂ ಕಾದಾಡಲು
ನಂಬಿಕೆಯೊಂದೇ ನಮ್ಮನ್ನು ಕಾಪಾಡದೇ...?

ಸ್ವತಂತ್ರದಿಂದಿದ್ದ ಮನುಜ ಹೆದರಿ ಪಂಜರದ ಪಕ್ಷಿಯಂತಾಗಿರಲು
ಮಲಿನಗೊಂಡಿದ್ದ ಪಂಚಭೂತಗಳು ಮರಳಿ ಶುದ್ಧತೆಯ ಪಡೆದಿರಲು |
ಪ್ರಕೃತಿಯು-ಪುತ್ರರಿಗೆ ಉತ್ತಮ ಪಾಠವನ್ನೇ ಕಲಿಸಿರಲು
ಇನ್ನಾದರೂ ಹೇಳಿ ನಂಬಿಕೆಯೊಂದೇ ನಮ್ಮನ್ನು ಕಾಪಾಡದೇ...?

ಗುಡಿಯ ಕಲ್ಲನ್ನು ಭಗವಂತನೆಂದು ಆರಾಧಿಸುವೆವು
ಹೆತ್ತವರನ್ನು-ಹಿರಿಯರನ್ನು ಭಕ್ತಿ-ಗೌರವದಿಂದ ಪೂಜಿಸುವೆವು|
ಗುರುಗಳನ್ನು, ನಾಯಕರನ್ನು, ವೈದ್ಯರನ್ನು ದೇವರೆಂದೇ ಗ್ರಹಿಸುವೆವು 
ಹಾಗಾದರೇ ನಂಬಿಕೆಯೊಂದೇ ನಮಗೆ ಬೆಳಕಾಗದೇ...?


ಪೃಥ್ವಿಯ ಸುತರಲ್ಲಿ ಸದ್ಚಿಂತನೆಯು ಬೇಕು 
ಸ್ವಚ್ಛತೆಯು-ಶುದ್ಧತೆಯು ಜಾಗೃತವಾಗಿರಬೇಕು |
ಹೋರಾಡುವ ಧೈರ್ಯ-ಆತ್ಮಸ್ಥೈರ್ಯ ಇನ್ನೂ ಬಲವಾಗಬೇಕು
ಹೀಗಾದರೆ ನಂಬಿಕೆಯೊಂದೇ ನಮ್ಮನ್ನು ಕಾಪಾಡದೇ...?

By: ಗೋವಿಂದ ಕೊಂಡಕಿರಿ

Comments[0] Likes[1] Shares[0]

Submit Your Comment

Latest Comments

No comments are available!