Poem

ನನಗೇಕೆ ಹೀಗೆನಿಸುತ್ತದೆ?

ಭೂಮಿತೂಕದವಳೆಂದೆ, ಆದರೆ ಆಗಸದಂತೆ ಸ್ವಚ್ಛಂದ ವಿಸ್ತಾರದವಳು ನಾನು!
ಹರಿವ‌ ನದಿಯೆಂದೆ, ಆದರೆ ಕಡಲಿನಂತೆ
ಗಂಭೀರ ಅಸೀಮ ಆಳದವಳು ನಾನು!
ಬಳಕುವ ಬಳ್ಳಿಯೆಂದೆ, ಆದರೆ ಮರದಂತೆ 
ಬೇರೂರಿ ರೆಂಬೆಗಳ ಚಾಚುವವಳು ನಾನು!
ಸುಂದರ ಹೂವೆಂದೆ,‌ ಆದರೆ ಮುಳ್ಳಂತೆ 
ಗಟ್ಟಿಯಾಗಿ ಪ್ರತಿಭಟಿಸಿ ಚುಚ್ಚುವವಳು ನಾನು!
ನಿನಗನಿಸುವುದೇ ನನಗೂ ಅನಿಸುವುದು;
ನಮ್ಮಾತ್ಮಗಳಿಗೆ ಭೇದವೆಲ್ಲಿಹುದು? ಆದರೆ 
ಅವುಗಳ ಮೇಲಿನ ಬಟ್ಟೆಯಷ್ಟೇ ಭಿನ್ನವಾಗಿಹುದು!

By: ಸುಮಾ ರಮೇಶ್

Comments[42] Likes[83] Shares[11]

Submit Your Comment

Latest Comments

Ashok Kumar
Jul 14,2020

ತುಂಬ ಸೊಗಸಾಗಿ ಮೂಡಿ ಬಂದಿದೆ

Raj Akkihal
Jul 14,2020

Superb! 👌 Last few lines are absolutely awesome! So true!

RAGHUPATHI SHASHIKALA .S
Jul 15,2020

ಅರ್ಥಪೂರ್ಣ ಕವಿತೆ, ಸೊಗಸಾಗಿದೆ.

Srinivas
Jul 14,2020

ತುಂಬಾ ಚೆನ್ನಾಗಿ ನೀವು ಯಾರು ಎಂದು ಕವಿತೆಯ ಮೂಲಕ ಹೇಳಿದ್ದೀರಿ. ಬಹುಶಃ ನಾವು ಕೂಡ ಹಾಗಬೇಕೆಂದು ಅನ್ನಿಸುತ್ತದೆ.

Anasuya M R
Jul 12,2020

ಕವಿತೆ ಆಶಯ ಸೊಗಸಾಗಿ ಮೂಡಿ ಬಂದಿದೆ

Phaniraj gururao
Jul 12,2020

ಬಹಳ ಉತ್ತಮವಾದ ಲೇಖನ. ನಿನಗನಿಸುವುದೆ ನನಗೂ ಅನಿಸುವುದು. ಶುಭವಾಗಲಿ. 👌🙏

MuralidharB
Jul 09,2020

ಮನದಾಳದ ಅನಿಸಿಕೆಗಳನ್ನು ಬಹಳ ಸುಂದರವಾಗಿ ವಿವರಿಸಿದ್ದೀರಿ

Asha Raghunath
Jul 09,2020

Good writeup

Shobha Shetty
Jul 09,2020

Amazing poem... so much of deep meaning. Please know that you have such talent and your words touched my heart 👏🏻👏🏻👏🏻

Ramkumar b r
Jul 09,2020

ಸೊಗಸಾಗಿದೆ ನಿಮ್ಮ ಕವಿತೆ. ಇನ್ನೂ ಹೆಚ್ಚು ಪ್ರಕಟಿಸಿ, ಪ್ರಶಸ್ತಿಗಳ ಸರಮಾಲೆ ಲಭಿಸಲೆಂದು ಹಾರೈಸುತ್ತೇನೆ. ಶುಭವಾಗಲಿ.

Rekha Sudhakar
Jul 09,2020

Superb! Very well written!!

Suhas Naidu
Jul 08,2020

Its a very inspiring poem to start off with, and a true presentation of the poet's amazing talent, truly one of the best poems and lastly very understandable and meaningful

Suma Murthy
Jul 08,2020

Nice poem. Very Well penned Suma.

ಭಾರತಿ ಎಂ
Jul 08,2020

ನಿನ್ನೆಣಿಕೆಯಂತೆ ನಾನಲ್ಲ ನನ್ನ ವಿಸ್ತಾರ,ಆಳ, ಗಟ್ಟಿತನ ನಿನ್ನ ಗ್ರಹಿಕೆಯನ್ನು ಮೀರಿದ್ದು ಅದು ನನ್ನ ಅಸ್ಮಿತೆ ಎನ್ನುವುದನ್ನು ಚಂದದ ಸಾಲುಗಳಲ್ಲಿ ಹಿಡಿದಿದ್ದೀರಿ ಮೆಡಮ್.

Ashok s hallur
Jul 08,2020

Excelent medam 👍

Sangeetha B S
Jul 08,2020

A woman plays multiple roles in her life! She is an exotic concoction of all the above flavours!

Roshani.P
Jul 08,2020

Very beautiful ma'am 😊

Keshava Murthy K N
Jul 08,2020

Very beautifully penned. Nicely expressed thoughts of the contrasts in nature and the dilemmas that troubles our mind.

M.G. PRABHAMANI
Jul 08,2020

ನಿಮಗೆ ಹೀಗೆನಿಸಿದುದು ಸರಿಯೇ ಇದೆ. ನಾರಿಯ ಶಕ್ತಿಯ ಪರಿಚಯ ಸುಂದರವಾಗಿ ಮೂಡಿ ಬಂದಿದೆ‌

Sudha Krishnagiri
Jul 08,2020

ಸುಂದರ ಕವಿತೆ

bhujanga Bh
Jul 06,2020

Super super super 🙏👍

Sanil
Jul 06,2020

Wonderful :-)

kiran
Jul 06,2020

excellent

Ramabhat
Jul 06,2020

Beautiful lines .also my feelings too .our minds always try to get answers but still innumerable questions spontaneously flow .let us try to find answers before our lives come to an.end

ಶ್ಯಾಮ್ ಪ್ರಕಾಶ್ ಮನಂ.
Jul 06,2020

ಚೆನ್ನಾಗಿದೆ, ಓದಿಸಿಕೊಂಡಿತು ಪದ್ಯ.

Sunil
Jul 06,2020

ಅಮೋಘ 🙂

c.s.krishnamurthy
Jul 06,2020

uttama bhavada chendada kavithe. hennina dani bhavapoornavaagi moodi bandide

Jayateerth M
Jul 06,2020

Nice poem

Sunil Kudalkar
Jul 06,2020

Beautiful and meaning full play of words. Makes a light and enjoyable reading at the same time conveys poets deep emotions... Short and sweet...

Rajkumar Badiger
Jul 06,2020

ಕವಿತೆ ಚೆನ್ನಾಗಿದೆ, ಮನಸ್ಸಿಗೆ ಮುದ ನೀಡಿತು.

Sheela Balasubramanya
Jul 06,2020

ತುಂಬಾ ಚನ್ನಾಗಿದೆ

jyothi
Jul 06,2020

good

Dr Nagesh S Adiga M D.,DNB neuro
Jul 06,2020

ಸರಳ ಸುಂದರ ಕವನ,,ನಿಮ್ಮ ಬಗ್ಗೆ ಹೆಮ್ಮೆ ಅನಿಸುತ್ತದೆ, ಬರೆಯುತ್ತಾ ಹೋದರೆ ನೀವು ಸ್ವರ್ಗ ಲೋಕಕ್ಕೆ ಹೋಗುವುದು, ( ಈ ಭೂಲೋಕ ಸ್ವರ್ಗ), ಕ್ಕೆ ಹೋಗುವುದು ಎಲ್ಲಾ ಪ್ರಸಿದ್ಧ ಕವಿಗಳಂತೆ ..

Pandu Indira
Jul 06,2020

ಹೆಣ್ಣೆಂದರೆ ವರ್ಣಿಸಲು ಅಸಾಧ್ಯ, ಊಹೆಗೆ ನಿಲುಕದ ಭವ್ಯ ವ್ಯಕ್ತಿತ್ವ ಅನ್ನೋ ವಾಸ್ತವದ ಸುಂದರ ಖಡಕ್ ಕವಿತೆ. ಶುಭಾಶಯಗಳು ಸುಮಾ.

D. Yeshodha Raju
Jul 06,2020

ಚೆಂದ ಇದೆ

Gowda Vijayalakshmi
Jul 06,2020

Viji vijimacha@gmail.com Beautiful comparison of extremities, ultimately womanhood triumph 's, it's the soul that needs to be noticed, well presented Suma

ರಂಜನಿ ರಾಮಪ್ರಸಾದ್
Jul 06,2020

ಅದ್ಭುತ ಪರಿಕಲ್ಪನೆ. Lovely selection of words .

ಘನಿ‌ ದೋಣಿಮಲೈ
Jul 06,2020

ಸುಂದರವಾಗಿದೆ

Anantha
Jul 06,2020

Nice rendition✍👍