Poem

ನನ್ನ ಅಂಬೇಡ್ಕರ್

ನನ್ನ ಅಂಬೇಡ್ಕರ

ಮನುಸ್ಮೃತಿಗೆ ಸೆಡ್ಡೊಡೆದ ಮಾನವತಾವಾದಿ
ಬಾಯಿಲ್ಲದ ಜನಗಳ ಪರ ನಿಂತ ಮೂಕನಾಯಕ
ಬಹಿಷ್ಕೃತ ಭಾರತದ ಹಿತ ಕಾಯ್ದ ಭಾರತೀಯ
ಜೈ ಭೀಮ ನಿನಗಿದೋ ಎನ್ನ ನಮನ

ವೇದ ಕೇಳಿದ ಅಸ್ಪ್ರಶ್ಯ ಕಿವಿಗೆ ಸೀಸ ಹುಯ್
ಎಂದವರ ಮುಂದೆ ಪಾಶ್ಚಿಮಾತ್ಯಕೆ ಹೋಗಿ
ಸಾಲು ಸಾಲು ಡಿಗ್ರಿ ಪಡೆದ ಅಸಾಮಾನ್ಯ ಡಾಕ್ಟರ್
ಜೈ ಭೀಮ ನಿನಗಿದೋ ಎನ್ನ ನಮನ

ಮುಟ್ಟಬೇಡ, ದಾರಿಯಲಿ ನಡೆಯಬೇಡ, ನೀರು ಕೊಡೆವು
ಗಾಡಿಯಲಿ ಕೂರಬೇಡ, ಓದಬೇಡ, ಬರೆಯಬೇಡ, ನೋಡಬೇಡ
ಇಂತಹ ನೂರಾರು ಬೇಡಗಳನು ಸ್ವಾಭಿಮಾನದಿಂ ಮೆಟ್ಟಿದ
ಜೈ ಭೀಮ ನಿನಗಿದೋ ಎನ್ನ ನಮನ

ಭರತ ಹಿಂದೂ ಧರ್ಮ ವೈದಿಕರ ಅಡಿ ನರಳೆ
ಪಂಡಿತ ತಾನಾದರೂ ಜಾತಿ ಹಿಡಿದು ಮೂದಲಿಸೆ
ಹಿಂದೂ ಕವಲಕುಡಿ ಹಿಡಿದು ಮೇಲೆದ್ದ ದಮ್ಮ ಮೂರ್ತಿ
ಬುದ್ಧಂ ಶರಣಂ ಗಚ್ಛಾಮಿ ಎಂದ
ಜೈ ಭೀಮ ನಿನಗಿದೋ ಎನ್ನ ನಮನ

ನನ್ನ ಅಂಬೇಡ್ಕರನೇ ಇಲ್ಲಿ ಕೇಳು
ಬಹುದೂರ ಸಾಗಬೇಕಿದೆ ಇನ್ನೂ ನಾವು
ಎಲ್ಲ ಶೂದ್ರರಿಗೂ ನ್ಯಾಯ ಸಿಕ್ಕಿಲ್ಲ
ಎಲ್ಲ ಮಹಿಳೆಯರು ಸ್ವತಂತ್ರರಾಗಿಲ್ಲ
ಭೀಮಶಕ್ತಿಯನು ನಮ್ಮೊಳು ತುಂಬು
ಜೈ ಭೀಮ ಕೈ ಹಿಡಿದು ಎಮ್ಮ ನಡೆಸು

By: ರೇಣುಕಾ ಚಿತ್ರದುರ್ಗ

Comments[6] Likes[29] Shares[2]

Submit Your Comment

Latest Comments

satisha j jajuru(sajala)
Jul 21,2020

ಕವಿತೆ ತುಂಬಾ ಅನುಭವಜನ್ಯವಾಗಿದೆ. ಸಾಮಾನ್ಯ ಮಾತುಗಳಿಗೆ ಭಾವನೆಗಳ ಸುವರ್ಣ ಚೌಕಟ್ಟು ನಿಂದ ಕವಿತೆಯನ್ನು ಕಟ್ಟಲಾಗಿದೆ . ಕಲಿಯದವರೂ ಕಾಮಧೇನುವಂತೆ ಕವಿತೆ ಒಲಿಯುವಂತಿದೆ.

ಅಲುಮೇಲು ವಿನೋದ್
Jul 21,2020

ತುಂಬಾ ಚೆನ್ನಾಗಿದೆ... 👏👏💐

Jayanth
Jul 21,2020

Revolutionary poem...

Venugoall
Jul 21,2020

Nice artical, Definatly if been tribute to our Constitution architect Babasaheb❤️

Renuka
Jul 21,2020

❤️

shivashankarr86@gmail.com
Jul 08,2020

ಕವಿತೆಯ ಆಶಯ ಚೆನ್ನಾಗಿದೆ ಆದರೆ ಕವಿತೆ ಕಾವ್ಯ ಭಾಷೆಗೆ ಇನ್ನಷ್ಟು ಒಡ್ಡಿಕೊಳ್ಳಬೇಕಿತ್ತೆನಿಸಿತು.