Poem

ನನ್ನ ಮಾದರಿ

ನನ್ನ ಮಾದರಿ...

ಸದಾ ಛಿದ್ರ-ವಿಛಿದ್ರ ಅರಚುಗಳ ವಿದ್ಯಾಲಯ ನಾಯಕರಲ್ಲ ನನ್ನ ಮಾದರಿ;
ಸಮಾಜವಾದವನ್ನು ಉಸಿರಾಗಿಸಿಕೊಂಡು ಸ್ವತಂತ್ರಕ್ಕಾಗಿ ಹುತಾತ್ಮರಾದ ಭಗತ್ ಸಿಂಗ್ ನನ್ನ ಮಾದರಿ;

ದೇಶವನ್ನು ತುಂಡು-ತುಂಡಾಗಿಸುವ ವಿಕಾರಿ ಮನಸ್ಥಿತಿಯಲ್ಲ ನನ್ನ ಮಾದರಿ;
ದೇಶವನ್ನು ಅಖಂಡವಾಗಿಸಿ ಎಲ್ಲರನ್ನೂ ಕೈ ಹಿಡಿದು ನಡೆಸುವ ಪ್ರಖಂಡತೆ ನನ್ನ ಮಾದರಿ;

'ಕಾಶ್ಮೀರ'ವನ್ನು ಕಡಿದು ಸ್ವತಂತ್ರವನ್ನು ಅತಂತ್ರ- ಪರತಂತ್ರವಾಗಿಸುವುದಲ್ಲ ನನ್ನ ಮಾದರಿ;
'ಕಾಶ್ಮೀರ'ವೆಂಬುದು ಬರೀ ನೆಲವಲ್ಲ ಅದು ಭಾರತಾಂಬೆಯ 'ಶಿರ' ಅದ ಕಾಯುವುದು ನನ್ನ ಮಾದರಿ;

ಅಲ್ಲಗಳಲ್ಲಿ ದೇಶಪ್ರೇಮವ ಹುಡುಕಿ ಹುಡುಕಿ ಪ್ರೇಮಶೂನ್ಯವಾಗಿಸುವುದಲ್ಲ ನನ್ನ ಮಾದರಿ;
ಅಲ್ಲಗಳನ್ನು ಅಹುದಾಗಿಸುವ, ಕೊಂಕು ಸೋಕಿದರೆ ರೋಮಗಳೆದ್ದು ನಿಲ್ಲುವ ದೇಶಪ್ರೇಮ ನನ್ನ ಮಾದರಿ;

ನಮ್ಮ ಸೈನಿಕರನ್ನು ನಿಂದಿಸುವ, ಶೌರ್ಯ- ತ್ಯಾಗವನ್ನು ಹೀಗಳೆಯಿವುದಲ್ಲ ನನ್ನ ಮಾದರಿ;
'ಸೈನಿಕರು ಚೆಲ್ಲಿದ ರಕ್ತದೋಳು ಉಸಿರಾಡುತ್ತಿರುವ ಬಿಂಬ ನಾನು' ಎಂಬ ಹಸಿ ಸತ್ಯದ ಸಾರ್ಥಕತೆ ನನ್ನ ಮಾದರಿ;

ಎಡ ಬಲ ಮಧ್ಯಮಗಳೆಲ್ಲ ಬೇರೆ ಬೇರೆ, ಬೇರೆ ಬೇರೆ ಎನ್ನುವುದಲ್ಲ ನನ್ನ ಮಾದರಿ;
ಎಡ,ಬಲ ಮಧ್ಯಮಗಳೆಲ್ಲ ಸೇರಿ ಮಿಡಿವ ಹೃದಯ ನನ್ನ ಮಾದರಿ;

By: ಶಂಕ್ರಯ್ಯ ಅಲಾಲ್‌ಮಠ್‌

Comments[5] Likes[14] Shares[2]

Submit Your Comment

Latest Comments

fuhj
Jul 12,2020

super kavana

Shivakumar
Jul 08,2020

Super and motivation poem heads up to you

waddodagi agurappaYal
Jul 06,2020

Super

urappaYalag
Jul 06,2020

Super

zalaki Iranna
Jul 06,2020

Super poem Guruji super duper......