Poem

ನೀನಾಗಿ ನೀ ಬದುಕು

 ನೀನಾಗಿ ನೀ ಬದುಕು
ನೀನಾಗಿ ನೀ ಬದುಕು ..... ನಿನಗಾಗಿ ಈ ಬದುಕು


ನೀರು
ಹರಿದರೆ ಹೊಳೆ
ನಿಂತರೆ ಕೆರೆ
ಬಿದ್ದರೆ ಮಳೆ
ಎದ್ದರೆ ಬುಗ್ಗೆ

ಕುಡಿದರೆ ನೀರು ಕೊಟ್ಟರೆ ತೀರ್ಥ
ನೀರಿಗೇನು ?
ತೀರ್ಥಕ್ಕಾಗಿ ನೀರಲ್ಲ , ನೀರಿಗದು ಬೇಕಿಲ್ಲ
ನೀನೂ ನೀರಾಗು ... ನೀನೇ  ನೀನಾಗು
ನೀನಾಗಿ ನೀ ಬದುಕು ..... ನಿನಗಾಗಿ ಈ ಬದುಕು !!

ಮರ
ಬೀಳಲಿದ್ದರ ಆಲ
ಬಿಳಿಯಾದರೆ ನೀಲ
ನೆರಳಿದ್ದರೆ ಹೊಂಗೆ
ಇರದಿದ್ದರರೇ ತೆಂಗು

ಬೆಳೆದರೆ ಮೇಲು ಕಡಿದರೆ ಮೇಜು
ಮರಕ್ಕೇನು ?
ನೆರಳಿಗಾಗಿ ಮರವಲ್ಲ , ನೆರಳು ಮರಕಲ್ಲ
ನೀನೂ ಮರವಾಗು .... ನೀ ಮರವಾದರೆ ನೀ ಅಮರ
ನೀನಾಗಿ ನೀ ಬದುಕು ..... ನಿನಗಾಗಿ ಈ ಬದುಕು !!


ಹಣ್ಣು
ಹುಳಿಯಾದರೆ ನಿಂಬೆ
ಒಗರಾದರೆ ಸೀಬೆ
ಸಿಹಿಯಾದರೆ ಮಾವು
ತೊಳೆಯಾದರೆ ಹಲಸು

ತಿಂದರ ಹಣ್ಣು ಬಿದ್ದರೆ ಬೀಜ
ಹಣ್ಣಿಗೇನು ?
ಯಾರೂ ತಿಂದರೂ ಹಣ್ಣು, ಬೀಜಕೆ ಬೇಕು ಮಣ್ಣು
ನೀನೂ ಹಣ್ಣಾಗು ..... ನಿನಗೆ ನೀ ಕಣ್ಣಾಗು
ನೀನಾಗಿ ನೀ ಬದುಕು ..... ನಿನಗಾಗಿ ಈ ಬದುಕು !!

ಹಕ್ಕಿ
ಹಾಡಿದರೆ ಕೋಗಿಲೆ
ಕೂಗಿದರೆ ಕಾಗೆ
ಈಜಿದರೆ ಹಂಸ
ಹಾರಿದರೆ ಹದ್ದು

ಮೊಟ್ಟೆ ಮೊದಲೋ ಕೋಳಿ ಮೊದಲೋ
ಹಕ್ಕಿಗೇನು ?
ಬಾನಿಗಾಗಿ ಹಾರಲಿಲ್ಲ ಹಕ್ಕಿ, ಹಾರಿದ್ದು ತನಗಾಗಿ
ನೀನೂ ಹಕ್ಕಿಯಾಗು .... ಏರು ಬಾನಲ್ಲಿ ಈಜು ನೀರಲ್ಲಿ
ನೀನಾಗಿ ನೀ ಬದುಕು ..... ನಿನಗಾಗಿ ಈ ಬದುಕು !!


 ನೀ .. ಹರಿದರೆ ನೀರು ...
ನೀ ... ಹಾರಿದರೆ ಹಕ್ಕಿ ...
ನೀ ... ಮಾಗಿದರೆ ಹಣ್ಣು
ನೀ ... ಬೆಳೆದರೆ ಮರ
ನೀ ಏನಾದರೂ  ಆಗು , ನೀ ನೀನಾಗು
ನೀನಾಗಿ ನೀ ಬದುಕು ..... ನಿನಗಾಗಿ ಈ ಬದುಕು !!
 

By: ಕೃಷ್ಣಾನಂದ್

Comments[11] Likes[48] Shares[3]

Submit Your Comment

Latest Comments

Vidya Aradhya
Jul 08,2020

ಸೊಗಸಾಗಿದೆ ಪದಗಳ ಜೋಡಣೆ. ಅರ್ಥಗರ್ಭಿತ👍

ವಿನಯ ಕುಮಾರ್ ಹನುಮಂತಪ್ಪ
Jul 08,2020

ಚೆನ್ನಾಗಿದೆ 👏🏾 👏🏾

Shobha Sripathi
Jul 06,2020

ಕವನ ತುಂಬಾ ಚೆನ್ನಾಗಿ ಬರೆದಿದ್ದೀರಿ

ಗುರುದತ್
Jul 06,2020

ನಮ್ಮನ್ನ ನಾವು ಅವಲೋಕಿಸುವ ಈ ವಿಭಿನ್ನ ಉದಾಹರಣೆಗಳು ಬಹಳ ಸರಳ ಹಾಗು ಉತ್ತಮವಾಗಿದೆ.

Ranganath Deshpande
Jul 06,2020

Excellent. Very Meaningful.

Raj
Jul 06,2020

It's so meaningful. Life lessons so well conveyed beautifully. All the best; keep up your good work.

sunderesh u
Jul 06,2020

Super

ಪ್ರಶಾಂತ್
Jul 06,2020

ಕೃಷ್ಣಾನಂದ ತುಂಬಾ ಸೊಗಸಾಗಿದೆ.

ಕಟೀಲು ವಿಜಯಾ ದಿವಾಕರ್
Jul 06,2020

ಪದ್ಯ ಅರ್ಥಗರ್ಭಿತ ವಾಗಿದೆ. ಇನ್ನೂ ಹೆಚ್ಚಿನ ಪದ್ಯ ಮಾಲೆ ಬರಲಿ

Laxman Kakkeri
Jul 06,2020

ತುಂಬಾ ಸೊಗಸಾಗಿದೆ 👏👏

Druthi
Jul 06,2020

Meaning full poem👏