Poem

ನ್ಯೂಯಾರ್ಕಿಗೆ ನೆಗಡಿಯಾದರೆ

ನ್ಯೂಯಾರ್ಕಿಗೆ ನೆಗಡಿಯಾದರೆ
     (1)
ಮೈಯೆಲ್ಲ ಮಾರಿಜ್ವರ
ಪಿತ್ತನೆತ್ತಿಗೆರುವಂತೆ ತೈಲಸಮರ
ಒಣಮರಕ್ಕೆ ಜೋತಾಡುವ ಬಾವಲಿಯಂತೆ
ಜನಗಣ ಮನಗಳ ಜೀವಜಗತ್ತು.

ಜನರಲ್ ವಾರ್ಡಿಗೆ ಸೇರಿಸಿ
ನರದ ತುಂಬಾ ಹರಿಯುವ ಸಿರಂಜಿನ ಝರಿ
ಬತ್ತಿಹೋದ ಗಂಗೆ, ಯುಮನೆ ಕಾವೇರಿ...

      (2)
ಬೀಜಿಂಗಿಗೆ ಭೇದಿಯಾದರೆ
ಜನಗಣ ಮನಗಳ ಮೂಗಿಗೆ ಸುಗಂಧ ದ್ರವ್ಯ
ವಿಳಾಸರಹಿತ ವಾಸನೆಗಳ ಸಾಲು
ಬಂಜೆಗಳಿಗೆ ಜಪಾನಿ ತೈಲು
ಹರಿದ ಕರುಳ ಕಟ್ಟಲು ಲಂಡನಿನ ನೂಲು

ಮಕ್ಕಳ ಮೈಮೇಲೆಲ್ಲ
ಲಂಡನ್, ಬೀಜಿಂಗ್, ನ್ಯೂಯಾರ್ಕಿನ ಬಣ್ಣ
ಈಗ ಮಣ್ಣಿನ ವಾಸನೆಗೂ 
ಸೇಂಟೂ, ಪಪ್ಯೂಮುಗಳೇ ಬೇಕು !


ಈಗ ಮೂತ್ರವೆಲ್ಲವು ತೀರ್ಥ
ಸಕಲ ಮಲಕ್ಕೂ ಮದ್ದಿನರ್ಥ

       (3).
ಮೂಗುಕಟ್ಟಿದರೆ ಹಣದ ಪರಿಮಳ 
ಹೊಟ್ಟೆಯುಬ್ಬರಕ್ಕೆ ಡಾಲರಿನ ದೋಸೆ
ತಲೆಬೇನೆಗೆ ತುಕ್ಕಿಹಿಡಿದ ರೂಪಾಯಿ ನೋಟು
ಎಲ್ಲರು ಸುಖವಾಗಿದ್ದಾರೆ
ಸಾವಿನ ಮನೆಯಲ್ಲಿ...!

ಹೀಗೆ ರೋಗಬಿದ್ದ  ಕನಸುಗಳಿಗೆ
ಎಲ್ಲಿಂದ ತರುವುದು ತುಳಸಿ, ಶುಂಟಿ,
ಅಶ್ವಗಂಧ, ಅರಿಶಿನ ದಂಟು ?
ಈ ಕುಲಾಂತರಿ ಲೋಕಕ್ಕೆ
ಏನಾದರೂ ಹೇಳು ಧನ್ವಂತರಿ !
 

By: ಮಹಂತೇಶ್‌ ಪಾಟೀಲ್‌

Comments[17] Likes[81] Shares[22]

Submit Your Comment

Latest Comments

Geetha
Jul 08,2020

Superb ennu hechhu kavite barali ant asisuve nimind tamma 👌

M . ArpithaahtiprAMs. Arpitha. M
Jul 08,2020

ಪ್ರಸ್ತುತದ ಸಂದರ್ಭಕ್ಕೆ ಒಪ್ಪುವ ಕವಿತೆ. ಸಮಸ್ಯೆ ತಂದ ನಾವುಗಳೇ ನಿವಾರಣೆಗೆ ಬದ್ದರಾಗಬೇಕಿದೆ ಎಂಬಂತ ಸಂದೇಶವೂ ಸೂಕ್ಷ್ಮವಾಗಿ ಗೋಚರಿಸಿದೆ. ತುಂಬಾ ಅರ್ಥಪೂರ್ಣ ಕವಿತೆ ಸರ್

S Y CHAYNISH
Jul 08,2020

Superb sir

b Prakash
Jul 08,2020

Nice..

Ashok Mauna
Jul 06,2020

mirror image of our lifestyle. Now our Indians are running behind swadeshi products. Its a beautiful and meaningful poem sir. 🙏🙏

S H SANTHOSHASanthomail Email
Jul 06,2020

ಜಗತ್ತಿನಲ್ಲಿ ನಡೆಯುವ ವೈರುಧ್ಯಗಳಿಗೆ ಹಿಡಿದ ಕೈ ಕನ್ನಡಿಯಂತಿರುವ ಪ್ರಸ್ತುತ ಕವನವು ಸತ್ಯದ ದರ್ಶನವನ್ನು ಮಾಡಿಸುವಂತಿದೆ... ಸಮಾಜದಲ್ಲಿ ನಡೆಯುತ್ತಿರುವ ರಾಜಕೀಯ ತಿಕ್ಕಾಟ, ಕೋಮು ಗಲಬೆ, ಅನಾರೋಗ್ಯದ ಅನಾಹುತಗಳು ಎಲ್ಲವನ್ನೂ ಕಟ್ಟಿ ಕೊಟ್ಟಿರುವ ಡಾ ಮಹಾಂತೇಶ್ ಪಾಟೀಲ್ ಸರ್ ಅವರಿಗೆ ಧನ್ಯವಾದಗಳು ಶುಭವಾಗಲಿ ಸರ್ 💐🌹🌹

ಸೋಮಕ್ಕ ಮಾದಾಪೂರ
Jul 06,2020

ಸಮಕಾಲೀನ ಬದುಕಿಗೆ ಈ ಕವಿತೆ ಕೈಗನ್ನಡಿಯಾಗಿದೆ.

Sunil p Hiremath
Jul 06,2020

Nice

nagoudaSangaSnagoudaSanganagoudaSang
Jul 06,2020

ನಮ್ಮ ಕಾಲದ ಕರೋನಾ ಬಿಕ್ಕಟ್ಟುಗಳು ಇಡೀ ಜಗತ್ತು ಎದುರಿಸಿದ ಬಗೆ ಹೇಗೆನ್ನುವುದು ಸೂಕ್ಷ್ಮವಾಗಿ ಹೇಳಿದ್ದೀರಿ...ಇಡೀ ಜಗತ್ತಿನಲ್ಲಿ ರೋಗವಾಗಲಿ, ಯುದ್ಧಗಳಾಗಲಿ, ಆರ್ಥಿಕ ಬಿಕ್ಕಟ್ಟುಗಳಾಗಲಿ ಇವುಗಳ ಮಧ್ಯ ಪ್ರೇಮದ ಸಭ್ಯತೆಯ ಗೆರೆಯನ್ನು ಹಿಡಿದುಡುವುದು ಸಂವೇದನಾ ಶೀಲರಿಗೆ ಮಾತ್ರ ಸಾಧ್ಯ

Triveni Banasode
Jul 06,2020

very nice

ಟಿ.ಎಸ್.ಮಹಾಲಕ್ಷ್ಮಿ
Jul 06,2020

ತುಂಬಾ ಚೆನ್ನಾಗಿದೆ. ಪ್ರಸ್ತುತ ಸಂದರ್ಭವನ್ನು ಎತ್ತಿ ಹಿಡಿಯುವಂತಿದೆ. ನಮ್ಮ ನಡುವಿನ ಅಪರೂಪದ ಕವಿ ನೀವು.

pratap gk
Jul 06,2020

ತುಂಬಾ ಚೆನ್ನಾಗಿದೆ sir

MmanviMmmavi
Jul 06,2020

ಚೆನ್ನಾಗಿದೆ ನಿಮ್ಮ ಕವಿತೆ ಸರ್

Sunil kumar b b
Jul 06,2020

Supar

Rathan Gowda
Jul 06,2020

Its supr sir

Basavanneppa m ಡಾ.
Jul 06,2020

ಈಗ ಮಣ್ಣಿನ ವಾಸನೆ, ದನದ ಗಂಜಲು ಶ್ರೇಷ್ಠ ಎನ್ನುವ ಕಾಲಕ್ಕೆ ಮರಳಿದ್ದಾಗಿದೆಯಲ್ಲ. ಕಾಲಾಯ: ತಸ್ಮೈ ನಮ: