Poem

ನಿರಂತರ

ನಿರಂತರ ಅಧ್ಯಯನದ ನಂತರ
ಅಂತರದ ಬದುಕು ಕಾರಣಾಂತರ
ಮಹತ್ತರ ಹೃದಯ, ಸೀಳಿತು ಅಂತರ
ಗುಂಡಾಂತರ ಎಲ್ಲವೂ ನಿರಂತರ ||

ಅಂತರಂಗ ಕಾಣಿಸದ ಹಂದರ
ಬಹಿರಂಗ ನಾಟಕದ ಗಂಡಾಂತರ
ಆರಂಭದಲ್ಲಿ ಅಂತ್ಯದ ದುರಹಂಕಾರ
ಅಂತ್ಯದಲ್ಲಿ ಆರಂಭದ ಮಮಕಾರ
ಅರಗಿಸಿಕೊಳ್ಳುವವನ ಆಕಾರ ರೂಪಾಂತರ
ಸಮಯದ ಮಾತಲ್ಲಿ ಸಮಯ ಬಂಗಾರ ||

ಕಂದರ ದೇಹ ಮರಣಾಂತರ
ಮತ್ತೆ ಹುಟ್ಟುವ ಆತ್ಮದ ಹಾಹಾಕಾರ
ನಿಖರ ಬದುಕುಗಳ ವಿಚಿತ್ರ ಆಕಾರ
ಅಂಧನ ಪ್ರಕಾರ ರೂಪವೆ ನಿರಾಕಾರ
ವಿಚಾರ ಮಾಡಿದರೆ ಅದೊಂದು ಚಮತ್ಕಾರ
ಅ-ಕಾರ ಉ-ಕಾರದಲ್ಲೇ ಝೇಂಕಾರ ||
 

By: ಮಧುಕರ್.ಟಿ.ಆರ್.

Comments[0] Likes[1] Shares[0]

Submit Your Comment

Latest Comments

No comments are available!