Poem

ನುಡಿಯ ಬೆಳಗೋಣ

ನುಡಿಯು ಬೆಳಗಲಿ 
ಮನೆಯ ಧೂಪವ ತನ್ನಿ 
ಮನದ ಉಸಿರ ತನ್ನಿ 
ನಾಡು ಜಗಮಗಿಸಲಿ 

ನನ್ನವ ನಿನ್ನವ ಕಾಣದವ 
ಯಾರಾದರೂ ಬರಲಿ 
ಗಂಧ ತೀಡಿದ ದನಿಯು 
ಹಸಿರು ಕಂಪಿನ ಸಿರಿಯು 

ಉರಿಯುವ ಆರದಿರುವ 
ದೀಪವಿದು ಹಚ್ಚಬನ್ನಿ 
ದೀವಿಗೆಯ ಬೆಳಕೇ ಸಾಕು 
ತುಂಬಲು ಜಗಕೆ ಬೆಳಕು 

ಮಂಗಳಾರತಿ ಎತ್ತಿರಿ 
ಸುಮಂಗಲೆಯಿವಳು 
ಎದೆಯ ಭಾವ ಹೊಮ್ಮಲಿ 
ಕಂಗಳು ತುಂಬಿಕೊಳ್ಳಲಿ
 
ಮಡುಗಟ್ಟಿದ ಜಡ್ಡು ಗಟ್ಟಿದ 
ಒಡಕು ತೊಡಕುಗಳ ಮೆಟ್ಟಿ 
ಮೈಮನಗಳ ಕೊಡವಿ ಬನ್ನಿ
ನವ ಹುರುಪು ತನ್ನಿ 

ಹಸಿರಾಗಿರಲಿ ಉಸಿರಾಗಲಿ 
ಇಂಪಾಗಲಿ ಕಂಪಾಗಲಿ 
ನಡೆಮುಡಿಯ ನಡುಗೆ 
ದಿಗಂತವೇರಲಿ 

By: ಹುಲಿಯೂರುದುರ್ಗ ಲಕ್ಷ್ಮೀನಾರಾಯಣ್

Comments[18] Likes[77] Shares[17]

Submit Your Comment

Latest Comments

ಹೊಸಮನೆ ಬಾಬು ಗಿರೀಶ್
Jul 21,2020

ಕವನ ತುಂಬಾ ಚೆನ್ನಾಗಿದೆ..ಸರ್ 👍

HNapurnaAnn
Jul 21,2020

Annapurna HN superb

Apoorva Karanth
Jul 15,2020

Superrr sir

Shivakumarv
Jul 14,2020

ಅದ್ಭುತವಾಗಿದೆ ಸರ್ ನಿಮ್ಮ ಕವನ

Amatu Saroja 0Satoja
Jul 14,2020

Super

ಉದಯಶಂಕರ
Jul 14,2020

ಕನ್ನಡ ನಾಡು , ನುಡಿ , ಬೆಳೆಯಲಿ, ಬೆಳಗಲಿ.

Gowda ShivarajrD
Jul 14,2020

ಕನ್ನಡ ಸಾಹಿತ್ಯದ ಬಗ್ಗೆ ಇರುವ ಕಾಳಜಿ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ ನೀವು ಈಗೆ ಮುಂದುವರೆಯಲಿ ನಿಮ್ಮ ಕನ್ನಡಾಂಬೆಯ ಕವನಗಳು....

Manjunatha nayaka N R
Jul 14,2020

ಸುಂದರ ಸರ್

r Santhosh
Jul 14,2020

ನುಡಿಯು ಸದಾ ಸಾಗಲಿ ಅನಂತದೆಡೆಗೆ...

IRAMMIIrRAMMA MARABASANNAVAR
Jul 14,2020

ತುಂಬಾ ಚನ್ನಾಗಿದೆ ಸರ್...

ನವೀನ್ ಕುಮಾರ್. ಕೆ
Jul 13,2020

ಉರಿಯುವ ಆರದಿರುವ ದೀಪವಿದು ಹಚ್ಚಬನ್ನಿ ದೀವಿಗೆಯ ಬೆಳಕೇ ಸಾಕು ತುಂಬಲು ಜಗಕೆ ಬೆಳಕು ಹೌದು ಪ್ರೀತಿ ಅನ್ನೊ ಒಂದು ದೀಪ ಸಾಕು ಜಗತ್ತೆ ಹೊಳೆಯುತ್ತದೆ

ಚಂದ್ರಶೇಖರ್
Jul 13,2020

ಸೊಗಸಾಗಿದೆ ಅಣ್ಣ

Ravikumara HB
Jul 13,2020

ನಿಮ್ಮ ಸರಳ ನಿರೂಪಣೆಯ ಶೈಲಿ ಓದಲು ಮನಸಿಗೆ ಮುದ ನೀಡಿತು....

GIRISHETTY K N
Jul 13,2020

Nice

B.G.Chandraiah
Jul 13,2020

ತುಂಬಾ ಚನ್ನಾಗಿ ಮೂಡಿಬಂದಿದೆ ಕವಿಗಳೇ ಈಗೆ ನಡೆಯಲಿ ನಿಮ್ಮ ಪ್ರಯಾಣ.

Hirenalluru Shivu
Jul 13,2020

Super

Afaq_mutahir_ahmed
Jul 10,2020

Amazing sir...

ಚರಣ್
Jul 10,2020

ತುಂಬಾ ಒಳ್ಳೆ ಕವಿತೆ ಸರ್ ಮನಸ್ಸಿಗೆ ತುಂಬಾ ಹಿಡಿಸಿತು