Poem

ಒಡನಾಡಿ

ಒಡನಾಡಿ


ಹೇ ಮಲೆನಾಡಗಿತ್ತಿ, ಓ ಸೌಂದರ್ಯಗಿತ್ತಿ
ನೀನೆಷ್ಟು ಮೋಹಕ
ನಿನ್ನ ಅಂದ ಚಂದದ ವಿಸ್ಮಯಕ್ಕೆ
ಸಿಕ್ಕ ಬಹುಚಿಕ್ಕ ಮಿಡಿತ ನಾನು
ಮೈ ಮನಗಳ ಮರೆತ  ಮಲೆನಾಡಿಗ ನಾನು !


ಇಲ್ಲಿರುವ ಗಿಡ ಮರಗಳು
ಬರೀ ಹಚ್ಚ ಹಸಿರಲ್ಲ
ಬೀಳ್ವ ಮಳೆ ಬರೀ ನೀರಲ್ಲ
ನಮಗವೋ ಒಡನಾಡಿ,
ನಮ್ಮೊಂದಿಗೆ ಬದುಕೋ ಜೀವನಾಡಿ.
ಹೇ ಶಂಕರ  ನೀನೆಂಥ ಜಾದುಗಾರ !


ನಮ್ಮೊಡಲ ಆಸೆಗಳ ಗರಿಬಿಚ್ಚಿ
ನಿನ್ನೊಡಲ ಬಗೆದು ಬಿತ್ತಿ
ಬೆಳೆದ ಬೆಳೆ ಶುಂಠಿ ಅಡಿಕೆ ಜೋಳ ಹತ್ತಿ
ನಮ್ಮೆಲ್ಲಾ ಅನಾಚಾರ ಸಹಿಸಿ
ಸಲಹುತ್ತಿರುವೇ ಓ ಮಲೆನಾಡಗಿತ್ತಿ
ಕರುಣೆಯಲಿ ನೀ ಸಹಸ್ರ ಹೃದಯಗಿತ್ತಿ !


ಬದುಕ ಹೊರೆಗೆ ಬೆಂದು
ಬಾಡಲಿಲ್ಲ ನಾವು ಎಂದು
ನೀ ಚೆಲುವ ಚಿತ್ರಗಳ ರಚಿಸಿ
ನಮ್ಮ ಗಮನ ಮರೆಸಿ
ನಮ್ಮಂತೆ ನಾವು ಬಾಳುತ್ತಿರುವೆವು
ಓ ಮಲೆನಾಡಗಿತ್ತಿ ನೀ ಮೋಹಕತೆ ಬಿತ್ತಿ !


ಬಿದ್ದ ಮಳೆಯು ಸರ್ವರನ್ನು ತೋಯಿಸಿ ನಡುಗಿಸುವುದಿಲ್ಲಿ
ಹಚ್ಚ ಹಸಿರು ನೀಡುವುದು ಒಂದೇ ಉಸಿರಿಲ್ಲಿ
ಗುಡಿಸಲು ಭಂಗಲೆಗೆ ಹರಿಯುವುದು ಒಂದೇ ಬೆಳಕಿಲ್ಲಿ
ಬಡವ ಶ್ರೀಮಂತ ಬೇಧವಿಲ್ಲ ನಿನ್ನಲ್ಲಿ 
ಓ ಮಲೆನಾಡಗಿತ್ತಿ ನೀ ಸಮನ್ವಯಗಿತ್ತಿ

By: ಮಧುಕುಮಾರ್ ಎನ್.

Comments[5] Likes[23] Shares[7]

Submit Your Comment

Latest Comments

NAIK GEETA UGEETA
Jul 09,2020

ಗೀತಾ ನಾಯ್ಕ್.... ಮಲೆನಾಡಿನ ಸೌಂದರ್ಯ ಕಣ್ಮುಂದೆ ಸೆರೆಹಿಡಿದಂತಿದೆ . ಸುಂದರವಾದ ರಚನೆ. ಸೂಪರ್.... ಜುಲೈ08 2020.

Srikanth N hegde
Jul 09,2020

ಮಲೆನಾಡಿನ ಗುಣಗಾನ ,,,,ಸೊಗಸಾಗಿದೆ

ಸುಷ್ಮಾ ಬಿ. ಎಸ್.
Jul 08,2020

ಮಲೆನಾಡ ತಾಯಿಯ ಗುಣಗಾನವನ್ನು ಹೇಳತೀರದು...ನೀವು ನಿಮ್ಮ ಸುಂದರವಾದ ಪದಮಾಲೆಯಿಂದ ಅವಳನ್ನು ಚಂದವಾಗಿ ಅಲಂಕರಿಸಿದ್ದೀರಿ 👌

Nopishankara M L
Jul 08,2020

ಮಲೆನಾಡಿನ ಇಂದಿನ ಪರಿಸರ ದ ಕಾವ್ಯಾತ್ಮಕ ಅನಾವರಣವಾಗಿದೆ.